ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಗನಯಾನಕ್ಕೆ ನಾಲ್ವರು ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಈಗ ಗಗನಯಾತ್ರಿಗಳ ಹೆಸರುಗಳು ಈಗ ಬಹಿರಂಗವಾಗಿದೆ.
12:41 PM Feb 27, 2024 IST | Ashitha S

ಕೊಚ್ಚಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಈಗ ಗಗನಯಾತ್ರಿಗಳ ಹೆಸರುಗಳು ಈಗ ಬಹಿರಂಗವಾಗಿದೆ.

Advertisement

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ನಾಲ್ವರು ಪೈಲಟ್ಗಳ ಹೆಸರನ್ನು ಪ್ರಧಾನಿ ಮೋದಿ ಅವರು ಇಂದು(ಫೆ.27) ಪ್ರಕಟಿಸಿದ್ದಾರೆ.

ಕೇರಳದ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಗ್ರೂಪ್ ಕ್ಯಾಪ್ಟನ್ ಪಿ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್ ಶುಕ್ಲಾ ಅವರು ಪೈಲಟ್ಗಳಾಗಿದ್ದಾರೆ.

Advertisement

ಪ್ರಧಾನಿ  ಮೋದಿ ಅವರು ಇಂದು ಕೇರಳದಲ್ಲಿರುವ ‘ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ’ (VSSC)ಗೆ ಭೇಟಿ ನೀಡಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಮಿಷನ್‌ಗೆ ಆಯ್ಕೆಯಾದ ಪೈಲಟ್‌ಗಳ ಹೆಸರನ್ನು ಪ್ರಕಟಿಸಿದ್ದು, ಗಗನಯಾನದ ಮಿಷನ್‌ನಗಳ ಸಿದ್ಧತೆಯನ್ನು ಪರಿಶೀಲನೆ ಮಾಡಿದ್ದಾರೆ. 2025ರಲ್ಲಿ ಇಸ್ರೋ ತನ್ನ ಮಹತ್ವಾಕಾಂಕ್ಷಿಯ ಗಗನಯಾನ ನಡೆಸುವ ನಿರೀಕ್ಷೆ ಹೊಂದಲಾಗಿದೆ. ಈ ಬಾಹ್ಯಕಾಶ ನೌಕೆಯಲ್ಲಿ 3 ಗಗನಯಾತ್ರಿಗಳು 7 ದಿನ ಪ್ರಯಾಣ ಮಾಡಲಿದ್ದಾರೆ.

Advertisement
Tags :
AnnouncementBreakingNewsGaganyaanGOVERNMENTindiaISROLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿ
Advertisement
Next Article