ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಿಂದೂ ಜಾಗೃತಿ ಸೇನೆ ಅಧ್ಯಕ್ಷನ ಮೇಲೆ ರೌಡಿ ಶೀಟ್‌ ತೆರೆದ ಪೊಲೀಸ್

ಹಿಂದೂ ಜಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಕಳೆದ ಡಿ.24ರಂದು ರೌಡಿ ಶೀಟ್‌ ತೆರೆದಿದ್ದಾರೆ.
03:16 PM Jan 06, 2024 IST | Ashika S

ಕಲಬುರಗಿ: ಹಿಂದೂ ಜಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಕಳೆದ ಡಿ.24ರಂದು ರೌಡಿ ಶೀಟ್‌ ತೆರೆದಿದ್ದಾರೆ.

Advertisement

ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುತ್ತಾರೆ, ಆದರೆ ಕೇವಲ ಒಂದೇ ಪೊಲೀಸ್‌ ಕೇಸ್‌ ಇರುವ ಹಿಂದು ಪರ ಕಾರ್ಯಕರ್ತ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಏಕಾಏಕಿ ರೌಡಶೀಟ್‌ ತೆರೆದಿರೋದು ಇಲ್ಲಿನ ಮಠಾಧೀಶರು, ಹಿಂದು ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಕ್ರಿಸ್ಮಸ್‌ ಹಬ್ಬದಂದು ಭಾಷಣ ಮಾಡಿ ಅಶಾಂತಿ ಉಂಟು ಮಾಡಬಹುದು ಎಂದು ಆರ್‌ಜಿ ನಗರ ಪೊಲೀಸರು ಈ ಕಾರಣ ಒಡ್ಡಿ ಡಿ.24ರಂದೇ ಲಕ್ಷ್ಮೀಕಾಂತ ಸ್ವಾಮಿ ವಿರುದ್ಧ ರೌಡಿಶೀಟ್‌ ಆರಂಭಿಸಿದ್ದಾರೆ.

Advertisement

ಲಕ್ಷ್ಮೀಕಾಂತ ಸ್ವಾಮಿ ಹಿಂದೂಪರ ಸಂಘಟನೆಯ ಪ್ರಮುಖ ಕಾರ್ಯಕರ್ತ. ಎಂದಿಗೂ ಯಾವ ಧರ್ಮದ ವಿರುದ್ಧ ಮಾತನಾಡಿ ಅಶಾಂತಿ ಉಂಟು ಮಾಡಿಲ್ಲ. ಪೊಲೀಸರು ಇದನ್ನೆಲ್ಲ ಕಲ್ಪಿಸಿಕೊಂಡು ರೌಡಿಶೀಟ್‌ ತೆರೆದಿರೋದು ಸರಿಯಲ್ಲವೆಂದು ಜಿಲ್ಲೆಯ ಕೇದಾರ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಪೊಲೀಸರ ಈ ಕ್ರಮವನ್ನು ಹಿಂದು ವಿರೋಧಿ ಎಂದು ಖಂಡಿಸಿದ್ದಾರೆ.

ಹಿಂದುಪರ ಕಾರ್ಯಕರ್ತನಾಗಿ ಲಕ್ಷ್ಮೀಕಾಂತ ಸ್ವಾಮಿ ಳೆದ 10 ವರ್ಷದಿಂದ ಕ್ರಿಯಾಶೀಲನಾಗಿದ್ದವ, ಪಠಾಣ ಚಿತ್ರದ ಪ್ರದರ್ಶನ ವಿರೋಧಿಸಿ ನಗರದ ಚಿತ್ರ ಮಂದಿರ ಮುಂದೆ ಧರಣಿ ನಡೆಸಿದ್ದಲ್ಲದೆ ಕಲ್ಲೆಸೆದಿದ್ದ, ಈ ಪ್ರಕರಣದಲ್ಲಿ 15 ದಿನ ಜೈಲುವಾಸ ಕೂಡಾ ಆಗಿತ್ತು. ಇದೊಂದೇ ಕೇಸ್‌ ಸ್ವಾಮಿ ಮೇಲೆ ಇರೋದು. ಇದೊಂದೇ ಕೇಸ್‌ ಇದ್ದರೂ ಕೂಡಾ ರಾಜಕೀಯವಾಗಿ ಪ್ರೇರಿತರಾಗಿ, ರೈಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ಪೊಲೀಸರು ಇವರ ವಿರುದದ್ಧ ರೌಡಿಶೀಟ್‌ ತೆರೆದಿರೋದು ನಾವೆಲ್ಲರೂ ಖಂಡಿಸುತ್ತೇವೆಂದು ಕೇದಾರ ಶ್ರೀಗಳು ಹೇಳಿದ್ದಾರೆ.

Advertisement
Tags :
LatestNewsNewsKannadaಜಿಲ್ಲಾಧ್ಯಕ್ಷಪೊಲೀಸರುರೌಡಿ ಶೀಟ್‌ಲಕ್ಷ್ಮೀಕಾಂತ ಸ್ವಾದಿಸೇನೆಹಿಂದೂ ಜಗೃತಿ
Advertisement
Next Article