ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಭಾಸ್ ಅಭಿಮಾನಿಗಳಿಗಾಗಿ ತಯಾರಾಗಿದೆ ಇನ್ನೊಂದು ಸಿಹಿ ಸುದ್ದಿ

ನಟ ಪ್ರಭಾಸ್ ನಟನೆಯ ‘ಸಲಾರ್​’ ಸಿನಿಮಾ ಸೂಪರ್​ ಹಿಟ್​ ಆದ ​ ಆಗಿದೆ. ಕರ್ನಾಟಕದಲ್ಲಿನ ಪ್ರೇಕ್ಷಕರು ಸ್ವಲ್ಪ ಮೂಗು ಮುರಿದರೂ ಕೂಡ ತೆಲುಗು ರಾಜ್ಯಗಳಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. 
06:54 PM Jan 11, 2024 IST | Ashika S

ಬೆಂಗಳೂರು: ನಟ ಪ್ರಭಾಸ್ ನಟನೆಯ ‘ಸಲಾರ್​’ ಸಿನಿಮಾ ಸೂಪರ್​ ಹಿಟ್​ ಆದ ​ ಆಗಿದೆ. ಕರ್ನಾಟಕದಲ್ಲಿನ ಪ್ರೇಕ್ಷಕರು ಸ್ವಲ್ಪ ಮೂಗು ಮುರಿದರೂ ಕೂಡ ತೆಲುಗು ರಾಜ್ಯಗಳಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

Advertisement

ಈ  ಸಿನಿಮಾದ ಗೆಲುವಿನ ಬೆನ್ನಲ್ಲೇ ಪ್ರಭಾಸ್​ ಅವರ ಅಭಿಮಾನಿಗಳಿಗಾಗಿ ಇನ್ನೊಂದು ಸಿಹಿ ಸುದ್ದಿ ಕೇಳಿ ಬಂದಿದೆ. ಅದು  ‘ಕಲ್ಕಿ 2898 ಎಡಿ’ ಸಿನಿಮಾ ತಂಡದಿಂದ.

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್​​ ಜೊತೆ ದೀಪಿಕಾ ಪಡುಕೋಣೆ, ಕಮಲ್​ ಹಾಸನ್​, ಅಮಿತಾಭ್​ ಬಚ್ಚನ್​, ದಿಶಾ ಪಟಾನಿ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

Advertisement

‘ಕಲ್ಕಿ 2898 ಎಡಿ’ ಸಿನಿಮಾ ಈ ವರ್ಷ ಸಂಕ್ರಾಂತಿಗೆ ಬಿಡುಗಡೆ ಆಗಬೇಕಿತ್ತು, ಆದರೆ ಕೆಲಸಗಳು ವಿಳಂಬ ಆದ ಕಾರಣ ಸಿನಿಮಾದ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದೆ.ಅದರೂ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಒಂದು ಸರ್ಪ್ರೈಸ್​ ಸಿಗಲಿದೆ.

ಅದು ಏನೆಂದರೆ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರೋಮೋ. ಈಗಾಗಲೇ ಸೆನ್ಸಾರ್​ ಮಂಡಳಿಯಿಂದ ಈ ಪ್ರೋಮೋಗೆ ಪ್ರಮಾಣ ಪತ್ರ ಕೂಡ ಸಿಕ್ಕಿದ್ದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ‘ಕಲ್ಕಿ 2898 ಎಡಿ’ ಪ್ರೋಮೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಇದು ಸೈನ್ಸ್​ ಫಿಕ್ಷನ್​ ಸಿನಿಮಾ ಆಗಿದ್ದು, ನಾಗ್​ ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿವೆ.

Advertisement
Tags :
LatestNewsNewsKannadaಕರ್ನಾಟಕತೆಲುಗುನಟ ಪ್ರಭಾಸ್ಪ್ರೇಕ್ಷಕರುಸಲಾರ್ಸೂಪರ್ ಹಿಟ್​
Advertisement
Next Article