ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೊಲೆಯಾದ ಪ್ರತಿಮಾ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದ ಬೆಂಗಳೂರು ನಗರ ಡಿಸಿ

ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಡಿಡಿ ಪ್ರತಿಮಾ ಕೊಲೆ ಪ್ರಕರಣ ರಾಜ್ಯವನ್ನೆ ಬೆಚ್ಚಿಬೀಳಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
02:30 PM Nov 05, 2023 IST | Ashika S

ಬೆಂಗಳೂರು: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಡಿಡಿ ಪ್ರತಿಮಾ ಕೊಲೆ ಪ್ರಕರಣ ರಾಜ್ಯವನ್ನೆ ಬೆಚ್ಚಿಬೀಳಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತಾನೇ ಇದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅಧಿಕಾರಿ ಒಬ್ಬಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಪತಿ ಊರಿನಲ್ಲಿ ಇದ್ದರು. ಸದ್ಯಕ್ಕೆ ಇದು ಆರಂಭಿಕ ಮಾಹಿತಿ. ಕೊಲೆಯ ಬಗ್ಗೆ ಸಂಪೂರ್ಣವಾದ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದ ಡಿಸಿ: ಕೆಲಸದ ವಿಚಾರದಲ್ಲಿ ಡಿಡಿ ಪ್ರತಿಮಾಗೆ ಯಾವುದೇ ಸಮಸ್ಯೆ ಇರಲಿಲ್ಲ. ಕೆಲಸದ ವಿಚಾರವಾಗಿ ಪ್ರತಿಮಾ ಯಾವುದೇ ಗಂಭೀರ ಆರೋಪ ಮಾಡಿರಲಿಲ್ಲ. ಡಿಡಿ ಪ್ರತಿಮಾ ದಕ್ಷ ಅಧಿಕಾರಿಯಾಗಿದ್ದರು, ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದರು. ಉಪ ನಿರ್ದೇಶಕಿ ಪ್ರತಿಮಾ ಪಾಸಿಟಿವ್ ಮೈಂಡ್ ಸೆಟ್‌ ಹೊಂದಿದ್ದರು. ಯಾವ ಕಾರಣಕ್ಕಾಗಿ ಕೊಲೆ ಎಂದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು.

Advertisement

ಘಟನಾ ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲಾ ಸಭೆಗಳಲ್ಲೂ ಕಡತಗಳ ಜೊತೆಗೆ ಹಾಜರಾಗುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಎಲ್ಲಾ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆ. ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೆಯುತ್ತಿದೆ, ತಮಿಳುನಾಡಿನಿಂದ ತರುತ್ತಿದ್ದಾರೆ ನೋಡಿ ಅಂದಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ. ಆ ರೀತಿಯ ಯಾವುದೇ ದೂರು ಬಂದಿಲ್ಲ ಎಂದು ವಿವರಿಸಿದರು.

Advertisement
Tags :
LatetsNewsNewsKannadaಇಲಾಖೆಉಪ ನಿರ್ದೇಶಕಿಕೊಲೆಗಣಿ-ಭೂವಿಜ್ಞಾನಡಿಡಿ ಪ್ರತಿಮಾಡಿಸಿಪ್ರಕರಣ
Advertisement
Next Article