For the best experience, open
https://m.newskannada.com
on your mobile browser.
Advertisement

"ಪದವಿಪೂರ್ವ ಕಾಲೇಜು": ಹರೇಕಳ ಹಾಜಬ್ಬ ಪ್ರಯತ್ನಕ್ಕೆ ಮತ್ತೊಂದು ಗರಿ

ಹರೇಕಳ ಹಾಜಬ್ಬ ಪರಿಶ್ರಮದಿಂದಾಗಿ ಉಳ್ಳಾಲ ತಾಲ್ಲೂಕಿನ ಹರೇಕಳದಲ್ಲಿ ನಿರ್ಮಿಸಿದ್ದ ಪ್ರೌಢಶಾಲೆಯು ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಲಿದೆ. ಹೌದು. . ಹರೇಕಳ ಪರಿಸರದಲ್ಲಿ ಪದವಿಪೂರ್ವ ಕಾಲೇಜು ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣದ ಕಾಲೇಜುಗಳಿಗೆ ಹೋಗಬೇಕಾದ ಸ್ಥಿತಿ ಇದೆ.
10:33 AM Feb 04, 2024 IST | Ashitha S
 ಪದವಿಪೂರ್ವ ಕಾಲೇಜು   ಹರೇಕಳ ಹಾಜಬ್ಬ ಪ್ರಯತ್ನಕ್ಕೆ ಮತ್ತೊಂದು ಗರಿ

ಮಂಗಳೂರು: ಹರೇಕಳ ಹಾಜಬ್ಬ ಪರಿಶ್ರಮದಿಂದಾಗಿ ಉಳ್ಳಾಲ ತಾಲ್ಲೂಕಿನ ಹರೇಕಳದಲ್ಲಿ ನಿರ್ಮಿಸಿದ್ದ ಪ್ರೌಢಶಾಲೆಯು ಪದವಿಪೂರ್ವ ಕಾಲೇಜಾಗಿ ಮೇಲ್ದರ್ಜೆಗೇರಲಿದೆ. ಹೌದು. . ಹರೇಕಳ ಪರಿಸರದಲ್ಲಿ ಪದವಿಪೂರ್ವ ಕಾಲೇಜು ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಪದವಿಪೂರ್ವ ವಿದ್ಯಾಭ್ಯಾಸಕ್ಕಾಗಿ ದೂರದ ಪಟ್ಟಣದ ಕಾಲೇಜುಗಳಿಗೆ ಹೋಗಬೇಕಾದ ಸ್ಥಿತಿ ಇದೆ.

Advertisement

ಹಾಗಾಗಿ ಇಲ್ಲಿನ ಪ್ರೌಢ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಬೇಕು ಎಂದು ಹರೇಕಳ ಹಾಜಬ್ಬ ಅವರು ಅನೇಕ ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಹಾಜಬ್ಬ ಅವರ ಮನವಿಗೆ ಸ್ಪಂದಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಪದವಿ ಪೂರ್ವ ಶಿಕ್ಷಣ) ಇಲ್ಲಿನ ಸರ್ಕಾರಿ ಪ್ರೌಢಶಾಲೆಯನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಆಗಿ ಉನ್ನತೀಕರಿಸಲು ಈಚೆಗೆ ಆದೇಶ ಹೊರಡಿಸಿದೆ.

Advertisement

ಇಲಾಖೆಯಲ್ಲಿ ಈಗಾಗಲೇ ಮಂಜೂರಾಗಿರುವ ಹುದ್ದೆಗಳನ್ನು ಬಳಸಿಕೊಂಡು ಹಾಗೂ ಲಭ್ಯ ಸಂಪನ್ಮೂಲಗಳಿಂದ ವೆಚ್ಚವನ್ನು ಭರಿಸುವ ಷರತ್ತಿಗೆ ಒಳಪಟ್ಟು ಪಿ.ಯು. ಕಾಲೇಜು ಆರಂಭಿಸುವುದಕ್ಕೆ ಮಂಜೂರಾತಿ ನೀಡಿದೆ.

Advertisement
Tags :
Advertisement