ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಿಸೆಂಬರ್ 2 ರಿಂದ ಪ್ರೋ ಕಬಡ್ಡಿ ಲೀಗ್ ಆರಂಭ

ಬಹುನಿರೀಕ್ಷಿತ 'ಪ್ರೋ ಕಬಡ್ಡಿ ಲೀಗ್' ಮತ್ತೇ ಎಂಟ್ರೀ ಕೊಟ್ಟಿದೆ. ಹೌದು. . . 10ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 2 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ
03:00 PM Dec 01, 2023 IST | Ashitha S

ಮುಂಬೈ: ಬಹುನಿರೀಕ್ಷಿತ "ಪ್ರೋ ಕಬಡ್ಡಿ ಲೀಗ್" ಮತ್ತೇ ಎಂಟ್ರೀ ಕೊಟ್ಟಿದೆ. ಹೌದು. . . 10ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 2 ರಂದು ಈ ಟೂರ್ನಿಗೆ ಚಾಲನೆ ಸಿಗಲಿದೆ.

Advertisement

ಭಾರತದಲ್ಲಿ, 2014 ರಲ್ಲಿ ಪ್ರಾರಂಭವಾದ ಪ್ರೋ ಕಬಡ್ಡಿ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ಕ್ರೀಡಾ ಲೀಗ್ ಆಗಿದೆ. 2006 ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಪಂದ್ಯಾವಳಿಯ ಜನಪ್ರಿಯತೆಯಿಂದ ಪ್ರಭಾವಿತಗೊಂಡು ಪ್ರೋ ಕಬಡ್ಡಿ ಲೀಗ್ ಆರಂಭವಾಯಿತು.

ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ.

Advertisement

ಇನ್ನು ಪ್ರೋ ಕಬಡ್ಡಿ ಲೀಗ್ 2023 ಶನಿವಾರ (ಡಿ 02) ಆರಂಭವಾಗಲಿದೆ. ಟೂರ್ನಿಯು ಎರಡು ತಿಂಗಳ ಕಾಲ ಮುಂದುವರಿಯಲಿದ್ದು ಫೆ. 21ಕ್ಕೆ ಮುಕ್ತಾಯಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳು ಪ್ರೋ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯನ್ನು ಭಾರತದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಹೊಂದಿವೆ.

ಈ ಬಾರಿಯ ಪ್ರೋ ಕಬಡ್ಡಿ ಲೀಗ್ 2023 ತಂಡಗಳು ಹೀಗಿವೆ: ಬೆಂಗಾಲ್ ವಾರಿಯರ್ಸ್., ಬೆಂಗಳೂರು ಬುಲ್ಸ್., ದಬಾಂಗ್ ದೆಹಲಿ KC., ಗುಜರಾತ್ ಜೈಂಟ್ಸ್.,ಹರಿಯಾಣ ಸ್ಟೀಲರ್ಸ್., ಜೈಪುರ ಪಿಂಕ್ ಪ್ಯಾಂಥರ್ಸ್., ಪಾಟ್ನಾ ಪೈರೇಟ್ಸ್., ಪುಣೇರಿ ಪಲ್ಟನ್., ತಮಿಳು ತಲೈವಾಸ್.,ತೆಲುಗು ಟೈಟಾನ್ಸ್., ಯು ಮುಂಬಾ ಹಾಗು ಯುಪಿ ಯೋಧಾಸ್ .

Advertisement
Tags :
indiaKARNATAKALatestNewsNewsKannadasportsಕಬಡ್ಡಿ ಲೀಗ್ಪ್ರೋ ಕಬಡ್ಡಿ ಲೀಗ್ಬೆಂಗಳೂರು
Advertisement
Next Article