ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಪ್ಪು ಬರ್ತ್‍ಡೇಗೆ ಮರು ಬಿಡುಗಡೆಯಾಗ್ತಿದೆ ಈ ಚಿತ್ರ

ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಅದರಂತೆ ಈ ಬಾರಿ ಅವರ ನಟನೆಯ ಜಾಕಿ ಸಿನೆಮಾ ರೀ-ರಿಲೀಸ್ ಆಗುತ್ತಿದೆ.
05:08 PM Feb 26, 2024 IST | Ashitha S

ಬೆಂಗಳೂರು: ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಅದರಂತೆ ಈ ಬಾರಿ ಅವರ ನಟನೆಯ ಜಾಕಿ ಸಿನೆಮಾ ರೀ-ರಿಲೀಸ್ ಆಗುತ್ತಿದೆ.

Advertisement

ದುನಿಯಾ ಸೂರಿ ನಿರ್ದೇಶನದ ಜಾಕಿ 2010ರಲ್ಲಿ ರಿಲೀಸ್ ಆಗಿತ್ತು. ಪಾರ್ವತಮ್ಮ ರಾಜ್​ಕುಮಾರ್ ಅವರು ನಿರ್ಮಾಣ ಹಾಗೂ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನೆಮಾದಲ್ಲಿ ಅಪ್ಪು ಹಾಗೂ ಭಾವನಾ ಜೋಡಿ ಸಖತ್ ಮೋಡಿ ಮಾಡಿತ್ತು. ಇದೀಗ ಮತ್ತೊಮ್ಮೆ ಮನರಂಜಿಸಲು 4K ರೀ ಮಾಸ್ಟರ್ಡ್ ವರ್ಷನ್​ನಲ್ಲಿ ಈ ಸಿನೆಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ 'ಜಾಕಿ' ಚಿತ್ರವನ್ನು ಅಪ್​​ಗ್ರೇಡ್ ಮಾಡುವ ಕೆಲಸ ನಡೆಯುತ್ತಿದ್ದು, ಮಾಸ್ಟರ್ಡ್ ವರ್ಷನ್​ನಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಪುನೀತ್ ರಾಜ್​ಕುಮಾರ್ 2021ರ ಅಕ್ಟೋಬರ್​ನಲ್ಲಿ ವಿಧಿವಶರಾದರು. 2022ರ ಮಾರ್ಚ್​ 17ರಂದು ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್ ಆಯಿತು. ಈಗ 2024ರಲ್ಲಿ 'ಜಾಕಿ' ಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

Advertisement

Advertisement
Tags :
APPUindiaLatestNewsNewsKannadaPunithrajKumarSANDALWOOD
Advertisement
Next Article