ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಪುಷ್ಪ 2’ ಚಿತ್ರದ ಟೀಸರ್ ಬಿಡುಗಡೆ: ರಗಡ್ ಅವತಾರದಲ್ಲಿ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಬರ್ತ್​ಡೇ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾ ‘ಪುಷ್ಪ 2’ ಚಿತ್ರದ ಟೀಸರ್​ನ ತಂಡ ಫ್ಯಾನ್ಸ್​ಗೆ ಗಿಫ್ಟ್ ಆಗಿ ಕೊಟ್ಟಿದೆ.
11:49 AM Apr 08, 2024 IST | Ashika S

ನಟ ಅಲ್ಲು ಅರ್ಜುನ್ ಬರ್ತ್​ಡೇ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾ ‘ಪುಷ್ಪ 2’ ಚಿತ್ರದ ಟೀಸರ್​ನ ತಂಡ ಫ್ಯಾನ್ಸ್​ಗೆ ಗಿಫ್ಟ್ ಆಗಿ ಕೊಟ್ಟಿದೆ.

Advertisement

ಟೀಸರ್ ನಲ್ಲಿ ಅಲ್ಲು ಅರ್ಜುನ್ ಅವರು ಸಖತ್ ರಗಡ್ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ.

ಒಂದು ನಿಮಿಷದ ಎಂಟು ಸೆಕೆಂಡ್ ಈ ಟೀಸರ್ ಇದೆ. ಇದರಲ್ಲಿ ಹೆಚ್ಚು ಭಾಗ ಅಲ್ಲು ಅರ್ಜುನ್ ಅವರ ಎಂಟ್ರಿಯನ್ನೇ ತೋರಿಸಲಾಗಿದೆ. ನಂತರ ಒಂದೆರಡು ಫೈಟಿಂಗ್ ದೃಶ್ಯ ಇದೆ. ಅಲ್ಲಿಗೆ ಇಡೀ ಟೀಸರ್ ಪೂರ್ಣಗೊಂಡಿದೆ.

Advertisement

ಈ ಮೊದಲು ಅಲ್ಲು ಅರ್ಜುನ್ ಅವರು ಮುಖಕ್ಕೆ ಬಣ್ಣ ಬಳಿದುಕೊಂಡು, ಸೀರೆ ಉಟ್ಟ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಇದರ ಪೋಸ್ಟರ್ ವೈರಲ್ ಆಗಿತ್ತು. ಈಗ ರಿಲೀಸ್ ಆಗಿರೋ ಟೀಸರ್​ನಲ್ಲಿ ಅಲ್ಲು ಅರ್ಜುನ್ ಅವರು ಇದೇ ಅವತಾರದಲ್ಲಿ ಫೈಟ್ ಮಾಡಿದ್ದಾರೆ. ಇದಕ್ಕಾಗಿ ಹಾಕಲಾದ ಬೃಹತ್ ಸೆಟ್​ಗಳು ಗಮನ ಸೆಳೆದಿವೆ.

ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮೊದಲಾದವರು ‘ಪುಷ್ಪ 2’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಪುಷ್ಪ 2’ ಚಿತ್ರವನ್ನು ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಪಾರ್ಟ್​ಗೆ ಹೋಲಿಕೆ ಮಾಡಿದರೆ ಎರಡನೇ ಪಾರ್ಟ್​ನಲ್ಲಿ ಅವರು ಮತ್ತಷ್ಟು ಪಳಗಿದಂತೆ ಕಾಣುತ್ತಿದೆ.

Advertisement
Tags :
'Pushpa 2'Allu ArjunLatetsNewsNewsKarnatakaTeaser
Advertisement
Next Article