For the best experience, open
https://m.newskannada.com
on your mobile browser.
Advertisement

ಸಖತ್‌ ಸದ್ದು ಮಾಡುತ್ತಿದೆ ನ್ಯಾಷನಲ್‌ ಕ್ರಶ್ ʼಪುಷ್ಪಾ 2ʼ ಲುಕ್‌

ಬಹು ನಿರೀಕ್ಷಿತ ಪುಷ್ಪಾ 2 ದಿ ರೂಲ್‌ ಚಿತ್ರವನ್ನು ಅಭಿಮಾನಿಗಳು ಕಾತರುದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇಂದು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಹಾಗಾಗಿ ಶ್ರೀವಲ್ಲಿ ಅಭಿಮಾನಿಗಳಿಗೆ ಚಿತ್ರ ತಂಡ ಬಿಗ್‌ ಸರ್ಪ್ರೈಸ್ ನೀಡಿದೆ.
04:01 PM Apr 05, 2024 IST | Ashitha S
ಸಖತ್‌ ಸದ್ದು ಮಾಡುತ್ತಿದೆ ನ್ಯಾಷನಲ್‌ ಕ್ರಶ್ ʼಪುಷ್ಪಾ 2ʼ ಲುಕ್‌

ಬಹು ನಿರೀಕ್ಷಿತ ಪುಷ್ಪಾ 2 ದಿ ರೂಲ್‌ ಚಿತ್ರವನ್ನು ಅಭಿಮಾನಿಗಳು ಕಾತರುದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ. ಇಂದು ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಹಾಗಾಗಿ ಶ್ರೀವಲ್ಲಿ ಅಭಿಮಾನಿಗಳಿಗೆ ಚಿತ್ರ ತಂಡ ಬಿಗ್‌ ಸರ್ಪ್ರೈಸ್ ನೀಡಿದೆ.

Advertisement

'ಪುಷ್ಪ 2' ಚಿತ್ರದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ತಂಡ ಹಂಚಿಕೊಂಡಿದೆ. ಶ್ರೀವಲ್ಲಿಯ ಈ ಲುಕ್‌ನ್ನು ಜನ ತುಂಬ ಇಷ್ಟಪಡುತ್ತಿದ್ದಾರೆ. ಪುಷ್ಪ 2 ರ ಈ ಪೋಸ್ಟರ್ ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ತುಂಬಾ ಪವರ್ ಫುಲ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರ ತಂಡ ಬಿಡುಗಡೆ ಮಾಡಿದ ಪೋಟೋದಲ್ಲಿ ರಶ್ಮಿಕಾ ಮಂದಣ್ಣ ಅವರು ಹಸಿರು ಸೀರೆಯನ್ನು ಉಟ್ಟಿದ್ದಾರೆ. ಅಲ್ಲದೆ ನೀಟಾಗಿ ತಲೆ ಬಾಚಿದ್ದು, ಹಣೆ ಬೊಟ್ಟನ್ನು ಹಂಚಿಕೊಂಡು, ಆಭರಣಗಳನ್ನು ಹಾಕಿಕೊಂಡು, ಕೈಯಲ್ಲಿ ತರಹೇವಾರಿ ಬಣ್ಣದ ಬಳೆಗಳನ್ನು ಹಾಕಿಕೊಂಡು, ಕಣ್ಣಿನ ಹತ್ತಿರ ಕೈಗಳಿಂದ ನೀಡಿದ ಲುಕ್ ಸಖತ್ ವೈರಲ್ ಆಗುತ್ತಿದೆ. ಕೊರಳಲ್ಲಿ ಮಂಗಳಸೂತ್ರ ಹಾಕಿರುವ ನೆಕ್ಲೇಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

Advertisement

ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲುಕ್ ಅನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಶೀಘ್ರದಲ್ಲೇ 'ಪುಷ್ಪ 2' ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಪುಷ್ಪ 2 ಚಿತ್ರ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ ಚಿತ್ರದ ಟೀಸರ್‌ಗೆ ಸಂಬಂಧಿತ ಅಪ್‌ಡೇಟ್‌ ಸಹ ನೀಡಿದೆ. ಈ ಚಿತ್ರದ ಟೀಸರ್ ಏಪ್ರಿಲ್ 8 ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.

ಇನ್ನು ಪುಷ್ಟ 2 ಓಟಿಟಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಹಿಂದಿ ತಯಾರಕರು ಬಹಿರಂಗ ಪಡಿಸಿದ್ದಾರೆ. OTT ಪ್ಲಾಟ್‌ಫಾರ್ಮ್ ಸ್ವತಃ ತನ್ನ Instagram ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಇನ್ನು 'ಪುಷ್ಪಾ 2' ಚಿತ್ರದ ಮೊದಲ ಟೀಸರ್ ಅನ್ನು ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

Advertisement
Tags :
Advertisement