For the best experience, open
https://m.newskannada.com
on your mobile browser.
Advertisement

ಮದ್ಯಕ್ಕಾಗಿ ಚಪ್ಪಲಿಯಲ್ಲಿ ಹೊಡೆದ ಖ್ಯಾತ ಸಿಂಗರ್

ಬಾಲಿವುಡ್​ನಲ್ಲೂ ಹಲವು ಗೀತೆಗಳಿಗೆ ಧ್ವನಿ ನೀಡಿರುವ, ಪಾಕಿಸ್ತಾನದ ಖ್ಯಾತ ಗಾಯಕ ಉಸ್ತಾದ್​ ರಾಹತ್ ಫತೇಹ್ ಅಲಿ ಖಾನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಮನಬಂದತೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
12:45 PM Jan 28, 2024 IST | Ashitha S
ಮದ್ಯಕ್ಕಾಗಿ ಚಪ್ಪಲಿಯಲ್ಲಿ ಹೊಡೆದ ಖ್ಯಾತ ಸಿಂಗರ್

ಬಾಲಿವುಡ್​ನಲ್ಲೂ ಹಲವು ಗೀತೆಗಳಿಗೆ ಧ್ವನಿ ನೀಡಿರುವ, ಪಾಕಿಸ್ತಾನದ ಖ್ಯಾತ ಗಾಯಕ ಉಸ್ತಾದ್​ ರಾಹತ್ ಫತೇಹ್ ಅಲಿ ಖಾನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಮನಬಂದತೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಪಾಕಿಸ್ತಾನದ ಸಮಾ ಟಿವಿ ಚಾನಲ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಪಾಕಿಸ್ತಾನಿ ಸಿಂಗರ್​, ಆಲ್ಕೋಹಾಲ್​ಗಾಗಿ ಮನೆಗೆಲದವನಿಗೆ ಹಲವಾರು ಜನರ ಮುಂದೆಯೇ ಹಲ್ಲೆ ಮಾಡಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ.

ಈ ವಿಡಿಯೋ ಎಕ್ಸ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಿಂಗರ್ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ವ್ಯಕ್ತಿಗೆ ಹೊಡೆಯುತ್ತಿದ್ದಾಗ ಬಾಟಲಿ ಎಲ್ಲಿಗೆ ಹೋಯಿತು ಎಂದು ಕೇಳುತ್ತಿದ್ದಾರೆ. ಇನ್ನು ತಮ್ಮ ನಡೆಯಿಂದ ರಾಹತ್ ಫತೇ ಅಲಿ ಖಾನ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಅವರು ಒಳ್ಳೆಯ ಗಾಯಕರಾಗಿರಬಹುದು, ಆದರೆ ಅವರು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಜನರು ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು “ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ” ಎಂದು ಕಾಮೆಂಟ್ ಮಾಡಿದ್ದಾರೆ.

Advertisement

ಇತ್ತ ರಾಹತ್ ಫತೇಹ್ ಅಲಿ ಖಾನ್ ನಂತರ ತಾವೂ ಹೊಡೆದಿದ್ದ ವ್ಯಕ್ತಿ ಮತ್ತು ಅವರ ತಂದೆಯೊಂದಿಗೆ ವಿಡಿಯೋ ಮಾಡಿದ್ದು, ತಾವೂ ಹಿಂದೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ವೈರಲ್ ವಿಡಿಯೋದಲ್ಲಿ ತಾವೂ ಮದ್ಯದ ಬಾಟಲಿಗಾಗಿ ಹಲ್ಲೆ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಅದು ಧಾರ್ಮಿಕ ಸ್ಥಳಗಳಿಂದ ತಂದಿದ್ದ ಪವಿತ್ರ ನೀರಿದ್ದ ಬಾಟೆಲ್. ಅದು ಸಿಕ್ಕದಿದ್ದರಿಂದ ನಾನು ಆ ರೀತಿ ವರ್ತಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಂದೆ ಮತ್ತು ಮಗನಿಂದಲೂ ಸ್ಪಷ್ಟನೆ ಕೊಡಿಸಿದ್ದಾರೆ.

Advertisement
Tags :
Advertisement