ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೀಂ ಇಂಡಿಯಾದ ಮುಖ್ಯ ಕೋಚ್​​ ಆಗಿ ಮತ್ತೆ ಕನ್ನಡಿನ ಆಯ್ಕೆ

ಭಾರತದ ಕ್ರಿಕೆಟ್​​ ತಂಡದ ಮುಖ್ಯ ಕೋಚ್ ಆಗಿ ಮತ್ತೆ ಕನ್ನಡಿಗ ರಾಹುಲ್​ ದ್ರಾವಿಡ್​ ಅವರು ಮರು ಆಯ್ಕೆ ಆಗಿದ್ದಾರೆ. 2023 ವಿಶ್ವಕಪ್​ ಟೂರ್ನಿ ವೇಳೆ ಟೀಮ್​ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್​ನಲ್ಲಿ ಮುಗ್ಗರಿಸಿತ್ತು. ಈ ಟೂರ್ನಿಯಲ್ಲೇ ದ್ರಾವಿಡ್ ಅವರ ಅವಧಿ ಮುಗಿದಿತ್ತು. ಆದ್ರೆ ಈ ಬಗ್ಗೆ ಬಿಸಿಸಿಐ ಸಭೆ ನಡೆಸಿ ಮತ್ತೆ ರಾಹುಲ್ ದ್ರಾವಿಡ್​​ರನ್ನೇ ಮುಖ್ಯ ಕೋಚ್​ ಆಗಿ ಮರು ನೇಮಕ ಮಾಡಿದೆ.
04:28 PM Nov 29, 2023 IST | Ashitha S

ಮುಂಬೈ: ಭಾರತದ ಕ್ರಿಕೆಟ್​​ ತಂಡದ ಮುಖ್ಯ ಕೋಚ್ ಆಗಿ ಮತ್ತೆ ಕನ್ನಡಿಗ ರಾಹುಲ್​ ದ್ರಾವಿಡ್​ ಅವರು ಮರು ಆಯ್ಕೆ ಆಗಿದ್ದಾರೆ. 2023 ವಿಶ್ವಕಪ್​ ಟೂರ್ನಿ ವೇಳೆ ಟೀಮ್​ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್​ನಲ್ಲಿ ಮುಗ್ಗರಿಸಿತ್ತು. ಈ ಟೂರ್ನಿಯಲ್ಲೇ ದ್ರಾವಿಡ್ ಅವರ ಅವಧಿ ಮುಗಿದಿತ್ತು. ಆದ್ರೆ ಈ ಬಗ್ಗೆ ಬಿಸಿಸಿಐ ಸಭೆ ನಡೆಸಿ ಮತ್ತೆ ರಾಹುಲ್ ದ್ರಾವಿಡ್​​ರನ್ನೇ ಮುಖ್ಯ ಕೋಚ್​ ಆಗಿ ಮರು ನೇಮಕ ಮಾಡಿದೆ.

Advertisement

ರಾಹುಲ್​ ದ್ರಾವಿಡ್​ ಅವರ ಮುಖ್ಯ ಕೋಚ್ ಅವಧಿ ಮುಗಿಯುತ್ತಿದ್ದಂತೆ ಐಪಿಎಲ್​ ಫ್ರಾಂಚೈಸಿಗಳು ಸಂಪರ್ಕಿಸಿದ್ದವು ಎನ್ನಲಾಗಿದೆ. ಆದರೆ ದ್ರಾವಿಡ್​ ಇದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮತ್ತೆ ಭಾರತ ತಂಡದ ಕೋಚ್ ಆಗಿ ಮುಂದುವರೆಯಲು ನಿರ್ಧಾರ ಮಾಡಿದ್ದಾರೆ.

ಇನ್ನು ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದು, ರಾಹುಲ್ ದ್ರಾವಿಡ್​ ಹಾಗೂ ಅವರ ಸಹಾಯಕ ಸಿಬ್ಬಂದಿ ಕಾಂಟ್ರಾಕ್ಟ್​ ಹುದ್ದೆಯನ್ನು ಮುಂದುವರೆಸಲಾಗುವುದು. ಇತ್ತೀಚೆಗೆ 2023ರ ವಿಶ್ವಕಪ್ ಪಂದ್ಯಾವಳಿಗಳು ಮುಗಿದ ನಂತರ ಅವರ ಒಪ್ಪಂದದ ಅವಧಿ ಮುಗಿದು ಹೋಗಿತ್ತು. ಹೀಗಾಗಿ ಬಿಸಿಸಿಐ ಅಧಿಕಾರಿಗಳು, ರಾಹುಲ್ ದ್ರಾವಿಡ್ ಜೊತೆ ಈ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿತ್ತು. ಇದರಲ್ಲಿ ಮರು ನೇಮಕಕ್ಕೆ ದ್ರಾವಿಡ್ ಅವರು ಒಪ್ಪಿಗೆ ಸೂಚಿಸಿದ್ದಲ್ಲದೇ ಸಭೆಯಲ್ಲಿದ್ದ ಅಧಿಕಾರಿಗಳೆಲ್ಲ ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.

Advertisement

Advertisement
Tags :
DravidHead CoachindiaLatestNewsNewsKannadaTEAM INDIAಕನ್ನಡಿನ ಆಯ್ಕೆ
Advertisement
Next Article