For the best experience, open
https://m.newskannada.com
on your mobile browser.
Advertisement

ಅಶ್ಲೀಲ ವಿಡಿಯೋ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಖಿ ಸಾವಂತ್

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಅರ್ಜಿಯನ್ನು ಬಾಂಭೆ ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ರಾಖಿ ಇದೀಗ ಸುಪ್ರೀಂ ಕೋರ್ಟ್  ಮೆಟ್ಟಿಲು ಏರಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.
03:36 PM Apr 22, 2024 IST | Ashika S
ಅಶ್ಲೀಲ ವಿಡಿಯೋ ಪ್ರಕರಣ  ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಖಿ ಸಾವಂತ್

ಮುಂಬೈ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಅರ್ಜಿಯನ್ನು ಬಾಂಭೆ ಹೈಕೋರ್ಟ್ ತಿರಸ್ಕರಿಸಿದೆ. ಹಾಗಾಗಿ ರಾಖಿ ಇದೀಗ ಸುಪ್ರೀಂ ಕೋರ್ಟ್  ಮೆಟ್ಟಿಲು ಏರಿದ್ದಾರೆ. ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.

Advertisement

ತಮ್ಮ ಖಾಸಗಿ ವಿಡಿಯೋಗಳನ್ನು ರಾಖಿ ಸಾವಂತ ಇತರರಿಗೆ ಹಂಚುತ್ತಿದ್ದಾರೆ. ಇದರಿಂದ ಮಾನನಷ್ಟವಾಗುತ್ತಿದೆ ಎಂದು ರಾಖಿ ಮಾಜಿ ಗೆಳೆಯ ಆದಿಲ್ ದೂರು ನೀಡಿದ್ದರು. ಜೊತೆಗೆ ಗಂಭೀರ ಆರೋಪವನ್ನೂ ಅವರು ಮಾಡಿದ್ದರು.

ಸದ್ಯ ಬೆಂಗಳೂರಿನಲ್ಲಿರುವ ಆದಿಲ್ ಮುಂದಿನ ದಿನಗಳಲ್ಲಿ ಮುಂಬೈಗೆ ಹೋದ ನಂತರ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.

Advertisement

ಈ ನಡುವೆ ಆದಿಲ್ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್  ಜೊತೆ ಮದುವೆ  ಆಗಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮ್ಯಾರೇಜ್ ಎಂದು ಪ್ರತಿಕ್ರಿಯೆ ನೀಡಿ, ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಅವರು ಖಚಿತ ಪಡಿಸಿದ್ದಾರೆ.

Advertisement
Tags :
Advertisement