For the best experience, open
https://m.newskannada.com
on your mobile browser.
Advertisement

ಇಂದು ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ʼರಾಮನವಮಿʼ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು .
10:27 AM Apr 17, 2024 IST | Ashitha S
ಇಂದು ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ʼರಾಮನವಮಿʼ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು .

Advertisement

ಪ್ರತಿವರ್ಷ ರಾಮ ನವಮಿಯನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಅದರಂತೆ, 2024 ರ ಏಪ್ರಿಲ್ 17ರ ಇಂದು ರಾಮ ನವಮಿ ಇದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಅವತರಿಸಿದನೆಂದು ಪುರಾಣ ಗ್ರಂಥಗಳು ಹೇಳಿವೆ. ಆದ್ದರಿಂದ ಈ ದಿನ ರಾಮ ನವಮಿಯನ್ನು ಆಚರಿಸಲಾಗುತ್ತದೆ. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಿಸಿದನು. ಹಾಗಾಗಿಯೇ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನವನ್ನು ಪವಿತ್ರ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ರಾಮ ನವಮಿಯಂದು ಜಗನ್ಮಾತೆಯಾದ ಆದಿಶಕ್ತಿ ದುರ್ಗೆಯ ಒಂಬತ್ತನೇ ಶಕ್ತಿಯಾದ ಸಿದ್ಧಿದಾತ್ರಿಯನ್ನೂ ಪೂಜಿಸಲಾಗುತ್ತದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ಮಧ್ಯಾಹ್ನ ಅವತಾರವೆತ್ತಿದರು. ರಾಮನವಮಿ ತಿಥಿಯಂದು ಭಗವಾನ್ ಶ್ರೀರಾಮನನ್ನು ಮಧ್ಯಾಹ್ನ ಪೂಜಿಸಲಾಗುತ್ತದೆ. ಭಗವಾನ್ ಶ್ರೀರಾಮನನ್ನು ಆರಾಧಿಸುವುದರಿಂದ, ವ್ಯಕ್ತಿಯ ಜೀವನದಲ್ಲಿ ಸಾಮಾನ್ಯವಾಗಿ ಎದುರಾಗುವ ದುಃಖ ಮತ್ತು ತೊಂದರೆಗಳು ಶಾಶ್ವತವಾಗಿ ದೂರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ. ಹಾಗೆಯೇ ಶ್ರೀರಾಮನ ಆಶೀರ್ವಾದವೂ ಸಿಗುತ್ತದೆ.

Advertisement

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು 2024ರ ಏಪ್ರಿಲ್ 16 ರಂದು ಮಧ್ಯಾಹ್ನ 01:23 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಏಪ್ರಿಲ್ 17 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳುತ್ತದೆ.

ರಾಮ ನವಮಿ ಮಹತ್ವ:
ಈ ಶುಭ ದಿನದಂದು ಶ್ರೀ ರಾಮ ಚಂದ್ರನು ಮನುಷ್ಯ ರೂಪದಲ್ಲಿ ಭೂಮಿಗೆ ಬಂದನು ಜೊತೆಗೆ ರಾಮ ವಿಷ್ಣುವಿನ ಏಳನೇ ಅವತಾರವಾಗಿರುವುದರಿಂದ ರಾಮ ನವಮಿ ಹಿಂದೂಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗ. ಭಗವಾನ್ ರಾಮನನ್ನು ಆದರ್ಶ ಮಾನವ, ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮುಖ್ಯವಾಗಿ ರಾಮ ಲಲ್ಲಾ ಜನಿಸಿದ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಶ್ರೀ ರಾಮನ ದರ್ಶನ ಪಡೆಯುತ್ತಾರೆ.

ಭಗವಾನ್ ರಾಮ ಮತ್ತು ಅವನ ಮೂವರು ಸಹೋದರರ ಜನನದ ಬಗ್ಗೆ ಪುರಾಣ ಕಥೆಯನ್ನು ಧರ್ಮಗ್ರಂಥಗಳು ಹೇಳುತ್ತವೆ. ರಾಜ ದಶರಥನ ರಾಣಿಯರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿಗೆ ಮಕ್ಕಳಾಗದಿದ್ದಾಗ ಅವರು ಪುತ್ರೇಷ್ಠಿ ಯಜ್ಞವನ್ನು ಏರ್ಪಡಿಸಿದರು ಎಂದು ಹೇಳಲಾಗುತ್ತದೆ. ಪ್ರಸಾದವನ್ನು ಸೇವಿಸಿದ ನಂತರ, ಪ್ರತಿಯೊಬ್ಬ ರಾಣಿಯೂ ಗರ್ಭಧರಿಸಿದಳು. ಕೌಸಲ್ಯೆಯು ರಾಮನಿಗೆ ಜನ್ಮವನ್ನು ನೀಡಿದರೆ, ಕೈಕೇಯಿಯು ಭರತನಿಗೆ ಜನ್ಮ ನೀಡಿದಳು ಮತ್ತು ಸುಮಿತ್ರೆಯು ಲಕ್ಷ್ಮಣನಿಗೆ ಜನ್ಮವನ್ನು ನೀಡಿದಳು. ಅಂದಿನಿಂದ ರಾಮನು ಜನಿಸಿದ ಈ ದಿನವನ್ನೇ ರಾಮ ನವಮಿ ಎಂದು ಆಚರಿಸಲಾಗುತ್ತದೆ.

Advertisement
Tags :
Advertisement