ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಂಜಾನ್ ಹಬ್ಬ ಭಾವೈಕ್ಯತೆಯ ದಿನ : ಜಹೀರ್ ಅಹ್ಮದ್

ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ. ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಸ್ಮಿ ಕಾರ್ಕಳದ ಜಾಮಿಸಿದಿಯ ಇಧ್ಗಾದಲ್ಲಿ ಮೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು.
12:27 PM Apr 10, 2024 IST | Chaitra Kulal

ಕಾರ್ಕಳ: ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ. ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಸ್ಮಿ ಕಾರ್ಕಳದ ಜಾಮಿಸಿದಿಯ ಇಧ್ಗಾದಲ್ಲಿ ಮೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು.

Advertisement

ಇಂದು ಬೆಳಗಿನಿಂದಲೇ ಕಾರ್ಕಳದ ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವಿಶೇಷ ನಮಾಜಿಗೋಸ್ಕರ ಬೆಳಕಿನಿಂದಲೇ ಇದ್ದಗಾದಲ್ಲಿ ಜಮಾಹಿಸಿದ್ದರು. ನಂತರ ಕಾರ್ಕಳ ಮುಸ್ಲಿಂ ಜಮಾತ್ನ ಅಧ್ಯಕ್ಷರಾದ ಅಶ್ವಾಕ್ ಅಹಮದ್ ಮಾತನಾಡಿ, ರಂಜಾನ್ ತಿಂಗಳಲ್ಲಿ ನಮ್ಮ ಮಸೀದಿಗಳಿಗೆ ಉತ್ತಮ ದೇಣಿಗೆಗಳನ್ನು ನೀಡಿದ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದೆ ಬರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ಕರೆ ನೀಡಿದರು.

ನಂತರ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಸ್ಮಿ ಪವಿತ್ರ ನಮಾಜ್ ಅನ್ನು ನೆರವೇರಿಸಿದರು. ನಂತರ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಮತ್ತು ತಮ್ಮವರು ಮೃತಪಟ್ಟ ಹಿರಿಯರ ಸಮಾಧಿಗಳಿಗೆ ಪ್ರಾರ್ಥನೆ ಸಲ್ಲಿಸಿದರು.

Advertisement

Advertisement
Tags :
fastingfestivalLatestNewsNewsKarnatakaಕಾರ್ಕಳರಂಜಾನ್
Advertisement
Next Article