For the best experience, open
https://m.newskannada.com
on your mobile browser.
Advertisement

‘ರಾಮಾಯಣ’ ಸಿನಿಮಾ: ಸಂಭಾವನೆ ಪಡೆಯಲು ನಿರಾಕರಿಸಿದ ಯಶ್

ಪ್ಯಾನ್ ಇಂಡಿಯಾ ಹೀರೋ ಆಗಿರುವ ರಾಕಿಂಗ್ ಸ್ಟಾರ್ ಯಶ್  ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಮುಂದಿನ ವರ್ಷ ಏಪ್ರಿಲ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
08:48 AM Apr 10, 2024 IST | Ashika S
‘ರಾಮಾಯಣ’ ಸಿನಿಮಾ  ಸಂಭಾವನೆ ಪಡೆಯಲು ನಿರಾಕರಿಸಿದ ಯಶ್

ಮುಂಬೈ: ಪ್ಯಾನ್ ಇಂಡಿಯಾ ಹೀರೋ ಆಗಿರುವ ರಾಕಿಂಗ್ ಸ್ಟಾರ್ ಯಶ್  ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಮುಂದಿನ ವರ್ಷ ಏಪ್ರಿಲ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Advertisement

ಈ ಮಧ್ಯೆ ಅವರ ನಟನೆಯ ‘ರಾಮಾಯಣ’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅವರು ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಇದರ ಬದಲು ಅವರು ನಿರ್ಮಾಪಕರಾಗುತ್ತಿದ್ದಾರೆ.

‘ರಾಮಾಯಣ’ ಸಿನಿಮಾಗಾಗಿ ಯಶ್ ಅವರು 80 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಿರ್ಮಾಪಕರು ಕೊಡಲು ಒಪ್ಪಿದ್ದಾರೆ. ಯಶ್ ಸಂಭಾವನೆ ತೆಗೆದುಕೊಂಡಿಲ್ಲ. ಬದಲಿಗೆ ಆ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರೆ. ಈ ಮೂಲಕ ಸಿನಿಮಾದ ನಿರ್ಮಾಪಕರಲ್ಲಿ ತಾವೂ ಒಬ್ಬರಾಗಿದ್ದಾರೆ.

Advertisement

ರಣಬೀರ್ ಕಪೂರ್ ಅವರು ಈಗಾಗಲೇ ತಮ್ಮ ಪಾಲಿನ ಸಂಭಾವನೆ 75 ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಈ ಮೊದಲು ಅವರು ಪ್ರತಿ ಸಿನಿಮಾಗೆ 30-35 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ, ‘ರಾಮಾಯಣ’ ಚಿತ್ರಕ್ಕಾಗಿ ಅವರು ಡಬಲ್ ಸಂಭಾವನೆ ಪಡೆದಿದ್ದಾರೆ. ಸಾಯಿ ಪಲ್ಲವಿ ಅವರು 6 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ, ‘ರಾಮಾಯಣ’ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ.

Advertisement
Tags :
Advertisement