ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆಫೆ ಬಾಂಬ್ ಸ್ಫೋಟ ಕೇಸ್:‌ ಅಪರಾಧಿಯನ್ನು ಹಿಡಿಯಲು ಸರ್ಕಾರಕ್ಕೆ ತಾಕತ್‌ ಇಲ್ಲ ಎಂದ ಕೋಟ

ಶುಕ್ರವಾರ ಬೆಂಗಳೂರು ನಗರದ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದರು. ಘಟನೆ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದೆ. ಘಟನೆ ನಡೆದು ಮೂರು ದಿನ ಆದರೂ ಆರೋಪಿಯ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.
04:13 PM Mar 04, 2024 IST | Ashitha S

ಮಂಗಳೂರು: ಶುಕ್ರವಾರ ಬೆಂಗಳೂರು ನಗರದ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದರು. ಘಟನೆ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದೆ. ಘಟನೆ ನಡೆದು ಮೂರು ದಿನ ಆದರೂ ಆರೋಪಿಯ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.

Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಈಗ ಭಯದ ವಾತವರಣದಿಂದ ಕೂಡಿದೆ. ರಾಮೇಶ್ವರಂ ಕೆಫೆಯಲ್ಲಿ ರಾಜರೋಷವಾಗಿ ಬಾಂಬ್ ಇಟ್ಟಿದ್ದಾರೆ.

ಬಾಂಬ್ ಇಟ್ಟವವನ್ನು ಇನ್ನೂ ಬಂಧಿಸುವಲ್ಲಿ ವಿಫಲವಾಗಿದೆ. ಅಪರಾಧಿಯನ್ನು ಹಿಡಿಯಲು ಮೀನಾ ಮೇಷ ಎಣಿಸುತ್ತಿದೆ. ತಾಕತ್‌ ಇಲ್ಲ.  ಸರ್ಕಾರ ಮೃದು ಧೋರಣೆಯನ್ನು ತೊರುತ್ತೀದೆ. ವಿಧಾನ ಸೌಧದಲ್ಲಿಯೇ ಪಾಕ್ ಪರ ಘೋಷಣೆ ಕೂಗಿದ್ದಾರೆ. ತನಿಖೆಯಲ್ಲಿ ಇದು ಸಾಬೀದಾಗಿದೆ ಅದರೂ ಕಾನೂನು ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದ್ದರು. ಅದರೆ ಇಂತಹಾ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದೆ. ಬಾಂಬ್ ಹಾಕುವವರನ್ನು ಭಯೋತ್ಪಾದನೆ ಕೃತ್ಯ ಮಾಡುವವರನ್ನು ನಿಯಂತ್ರಣಕ್ಕೆ ತರಬೇಕು. ಇಲ್ಲವಾದರೆ ರಾಜ್ಯದ ನಾಯಕರು ರಾಜೀನಾಮೆ ಕೊಡಲಿ.

Advertisement

ಬಿಜೆಪಿ ಸರ್ಕಾರ ಇರುವಾಗ ಭಯೋತ್ಪಾದಕ ಎಂದು ತಿಳಿದ ತಕ್ಷಣ ಕ್ರಮವನ್ನು ತೆಗೆದುಕೊಂಡಿದ್ದೇವೆ. ಅದರೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧನ ಹೊರ ಹಾಕಿದ್ದಾರೆ.

 

Advertisement
Tags :
indiaKARNATAKALatestNewsNewsKannadaಕೆಫೆಕೋಟನವದೆಹಲಿಮಂಗಳೂರು
Advertisement
Next Article