For the best experience, open
https://m.newskannada.com
on your mobile browser.
Advertisement

ʻಡಾನ್‌ʼ 3ಗೆ ಏರಿದ ಬಜೆಟ್‌: ರಣವೀರ್‌ ಮಾಸ್‌ ಎಂಟ್ರಿ

‘ಡಾನ್’ ಹಾಗೂ ‘ಡಾನ್ 2’ ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದೀಗ ಇವರ ನಿರ್ದೇಶನದ ʼಡಾನ್‌ʼ 3 ಗೆ ದೊಡ್ಡ ಮಟ್ಟತ ಸಿದ್ಧತೆ ನಡೆದಿದ್ದು ಇದರ ಬಜೆಟ್ 300 ಕ್ಕೆ ತಲುಪಿದೆ ಎಂದು ಸುದ್ದಿ ಕೇಳಿ ಬಂದಿದೆ.
11:14 AM Feb 24, 2024 IST | Ashika S
ʻಡಾನ್‌ʼ 3ಗೆ ಏರಿದ ಬಜೆಟ್‌  ರಣವೀರ್‌ ಮಾಸ್‌ ಎಂಟ್ರಿ

ಮುಂಬೈ: ‘ಡಾನ್’ ಹಾಗೂ ‘ಡಾನ್ 2’ ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದೀಗ ಇವರ ನಿರ್ದೇಶನದ ʼಡಾನ್‌ʼ 3 ಗೆ ದೊಡ್ಡ ಮಟ್ಟತ ಸಿದ್ಧತೆ ನಡೆದಿದ್ದು ಇದರ ಬಜೆಟ್ 300 ಕ್ಕೆ ತಲುಪಿದೆ ಎಂದು ಸುದ್ದಿ ಕೇಳಿ ಬಂದಿದೆ.

Advertisement

ಈ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಮುಖ್ಯಪಾತ್ರ ವಹಿಸುತ್ತಿದ್ದು ಡಾನ್‌ ಆಗಿ ಮಾಸ್‌ ಎಂಟ್ರಿ ಕೊಟ್ಟಿದ್ದಾರೆ ಹಾಗೂ ಇವರ ಜೊತೆಯಾಗಿ ಕಿಯಾರ ಅಡ್ವಾಣಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ ಸಿನಿಮಾಗಳು ಒಂದರ ಮೇಲೊಂದು ಯಶಸ್ಸು ಕಾಣುತ್ತಿವೆ ಉದಾಹರಣೆಗೆ ʻಪಠಾನ್‌ʼ ʻಜವಾನ್‌ʼ ದೊಡ್ಡ ಬಜೆಟ್‌ ತಯಾರಾದ ಸಿನಿಮಾಗಳು ಇವುಗಳ ಬಜೆಟ್‌ 1000 ಕೋಟಿ ರೂ ತಲುಪಿತ್ತು.ಹಾಗೆ ʻಅನಿಮಲ್‌ʼ ʻಗದರ್‌ʼ ಮೊದಲಾದ ಚಿತ್ರಗಳ ಕಲೆಕ್ಷನ್ ಕೂಡ 500 ಕೋಟಿ ರೂಪಾಯಿ ದಾಟಿದೆ. ಇದೇ ರೀತಿ ʻಡಾನ್‌ʼ ಚಿತ್ರ ಕೂಡ ದೊಡ್ಡ ಬಜೆಟ್‌ ನಲ್ಲಿ ಮಾಡಲು ಸಿದ್ಧವಾಗಿದೆ.

Advertisement

‘ಡಾನ್’ ಹಾಗೂ ‘ಡಾನ್ 2’ ಇದಕ್ಕಿಂತ ಸಾಧಾರಣ ಬಜೆಟ್‌ನಲ್ಲಿ ತಯಾರಾಗಿತ್ತು. ಹಾಗೂ ಈ ಎರಡು ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯ ಪಾತ್ರವಹಿಸಿದ್ರು. ʻಡಾನ್‌ʼ 3 ನ್ನು ಗ್ಲೋಬಲ್ ಸಿನಿಮಾ ಆಗಿ ಮಾಡುವ ಉದ್ದೇಶವನ್ನು ಫರ್ಹಾನ್ ಹೊಂದಿದ್ದಾರೆ. ಈ ಚಿತ್ರದಲ್ಲಿ ವಿಶ್ವದರ್ಜೆಯ ತಂತ್ರಜ್ಞರು ಇರಲಿದ್ದಾರೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.

‘ಡಾನ್’ ಸರಣಿಯಲ್ಲಿ ಹೀರೋಗೆ ನೆಗೆಟಿವ್ ಶೇಡ್ ಇರಲಿದ್ದು ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಲ್ಲಿ ವಿಲನ್ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ. ಶಾರುಖ್ ಖಾನ್ ಅವರನ್ನು ರಣವೀರ್ ಸಿಂಗ್ ರಿಪ್ಲೇಸ್ ಮಾಡಿರುವ ಕಾರಣ ಕಿಂಗ್ ಖಾನ್ ಅಭಿಮಾನಿಗಳಿಗೆ ಬೇಸರ ಮೂಡಿತ್ತು. ಈ ಸರಣಿ ಹಿಟ್ ಆಗುವುದಿಲ್ಲ ಎಂದು ಅನೇಕರು ಭವಿಷ್ಯ ನುಡಿದವರಿಗೆ ಫರ್ಹಾನ್ ಅಖ್ತರ್ ʻಡಾನ್‌ʼ 3 ಮೂಲಕ ಉತ್ತರ ನೀಡಲಿದ್ದಾರೆ.

ಈ ಮೊದಲು ಅಮಿತಾಭ್ ಬಚ್ಚನ್ ಅವರು ‘ಡಾನ್’ ಸಿನಿಮಾ ಮಾಡಿದ್ದರು. ಅವರ ಸ್ಥಾನವನ್ನು ಶಾರುಖ್ ಖಾನ್ ತುಂಬಿದಾಗ ಜನರು ಒಪ್ಪಿಕೊಂಡರು. ಈಗಲೂ ಅದೇ ರೀತಿ ಆಗಲಿದೆ ಎಂಬುದು ಫರ್ಹಾನ್ ಅಖ್ತರ್ ಅಭಿಪ್ರಾಯ. ಸದ್ಯ ಸಿನಿಮಾಗೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಸಿನಿಮಾದ ಶೂಟಿಂಗ್ ಶುರುವಾಗುವ ಮುನ್ನವೇ ಎಲ್ಲೆಡೆ ಭಾರಿ ಚರ್ಚೆ ನಡೆಯುತ್ತಿದೆ.

Advertisement
Tags :
Advertisement