For the best experience, open
https://m.newskannada.com
on your mobile browser.
Advertisement

ರಣ್‌ ಬೀರ್‌ ಕಪೂರ್‌ ಗೆ ಕನ್ನಡ ಕಲಿಸಿದ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.
04:28 PM Nov 22, 2023 IST | Ashika S
ರಣ್‌ ಬೀರ್‌ ಕಪೂರ್‌ ಗೆ ಕನ್ನಡ ಕಲಿಸಿದ ರಶ್ಮಿಕಾ ಮಂದಣ್ಣ

ಮುಂಬೈ: ನಟಿ ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಚಿತ್ರದಲ್ಲಿ ರಣ್‌ಬೀರ್‌ ಕಪೂರ್‌ ಅವರೊಂದಿಗೆ ರಶ್ಮಿಕಾ ಮಂದಣ್ಣ ಲಿಪ್‌ ಲಾಕ್‌ ಮಾಡಿರುವುದು ಭಾರಿ ವೈರಲ್‌ ಆಗಿತ್ತು. ಇಂದು ಅನಿಮಲ್‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದ್ದು, ಸಿನಿಮಾ ತಂಡದ ರಣ್‌ ಬೀರ್‌ ಹಾಗೂ ರಶ್ಮಿಕಾ ಇಂಡಿಯನ್‌ ಐಡಲ್‌ -14 ಶೋಗೆ ಪ್ರಚಾರಕ್ಕಾಗಿ ಬಂದಿದ್ದರು.

ಈ ವೇಳೆ ರಶ್ಮಿಕಾಗೆ ಸುದ್ದಿಗಾರರನ್ನು ಉದ್ದೇಶಿಸಿ ರಣ್‌ಬೀರ್‌ ಏನು ನಮ್ಮ ಡಾಕ್ಯುಮೆಂಟರಿ ಮಾಡುತ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸುದ್ದಿಗಾರರು ಕನ್ನಡದಲ್ಲಿ ಮಾತನಾಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ರಶ್ಮಿಕಾ ಎಲ್ಲರಿಗೂ ನಮಸ್ಕಾರ ಎಂದಿದ್ದಾರೆ. ಬಳಿಕ ಹೇಗಿದ್ದೀರಾ ಎಲ್ಲರಿಗೂ ನಮಸ್ಕಾರ ಎಂದು ರಣ್‌ಬೀರ್‌ ಅವರಿಗೆ ರಶ್ಮಿಕಾ ಕನ್ನಡ ಕಲಿಸಿದ್ದಾರೆ. ರಣ್‌ ಬೀರ್‌ ಕೂಡ ಕನ್ನಡದಲ್ಲಿಯೇ ಮಾತನಾಡಿದ್ದಾರೆ.

Advertisement

Advertisement
Tags :
Advertisement