For the best experience, open
https://m.newskannada.com
on your mobile browser.
Advertisement

ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇಂರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಕಿರಿಕ್​ ಹುಡುಗಿ 2೮ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟಿಗೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.
11:52 AM Apr 05, 2024 IST | Ashitha S
ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇಂರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಕಿರಿಕ್​ ಹುಡುಗಿ 2೮ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನೆಚ್ಚಿನ ನಟಿಗೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

Advertisement

ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ. 2016ರಲ್ಲಿ ರಿಲೀಸ್ ಆದ ಈ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸಾನ್ವಿ ಜೋಸೆಫ್ ಆಗಿ ಅಭಿನಯಿಸಿದ್ದ ರಶ್ಮಿಕಾ, ಕನ್ನಡದ ಸುಂದರಿಯಾಗಿ ಕನ್ನಡಿಗರ ಮನೆ, ಮನ ಸೇರಿದ್ದರು.

2018ರಲ್ಲಿ ತೆರೆ ಕಂಡ ಚಲೋ ಎಂಬ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ತೆಲುಗಿಗೆ ಎಂಟ್ರಿ ಕೊಟ್ರು. ನಾಗಶೌರ್ಯ ಹೀರೋ ಆಗಿ ನಟಿಸಿದ್ದ ಈ ಸಿನಿಮಾದಲ್ಲಿ ರಶ್ಮಿಕಾ ತೆಲುಗು ಚಿತ್ರ ರಸಿಕರ ಪಾಲಿನ ಫೆವರೇಟ್ ಆದ್ರು. ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಆದರೆ ರಶ್ಮಿಕಾ ಮಂದಣ್ಣಗೇ ಈ ಸಿನಿಮಾವೇ ತೆಲುಗು ಚಿತ್ರರಂಗಕ್ಕೆ ರೆಡ್ ಕಾರ್ಪೆಟ್ ಹಾಸಿತು.
Rashmi

Advertisement

ಅದೇ ವರ್ಷ ತೆಲುಗಿನಲ್ಲಿ ತೆರೆ ಕಂಡ ಗೀತ ಗೋವಿಂದ ರಶ್ಮಿಕಾ ಮಂದಣ್ಣ ಸಿನಿ ಕೆರಿಯರ್ ಅನ್ನೇ ಬದಲಾಯಿಸಿತು. ವಿಜಯ್ ದೇವರಕೊಂಡ ನಾಯಕನಾಗಿದ್ದ ಈ ಸಿನಿಮಾದಲ್ಲಿ ಗೀತ ಆಗಿ ರಶ್ಮಿಕಾ ಕಾಣಿಸಿಕೊಂಡರು. ಸಿನಿಮಾ ಬಿಗ್ ಹಿಟ್ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಭದ್ರವಾಗಿ ನೆಲೆಯೂರಿದರು.

ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸುವಾಗಲೇ ರಶ್ಮಿಕಾಗೆ ಕರ್ನಾಟಕ ಕ್ರಶ್ ಎಂದು ಖ್ಯಾತಿ ಪಡೆದರು. ಆನಂತರ ಅವರನ್ನು ನ್ಯಾಷನಲ್ ಕ್ರಶ್ ಎಂದು ಫೇಮಸ್ ಆದರು. ಕನ್ನಡ, ಹಿಂದಿ, ತೆಲುಗು, ತಮಿಳಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಅನೇಕ ಬಿಗ್ ಹಿಟ್ಗಳನ್ನು ನೀಡಿದ್ದಾರೆ.  ಇಂದು ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬದ ಪ್ರಯುಕ್ತ ‘ದಿ ಗರ್ಲ್‌ಫ್ರೆಂಡ್‌’ ಟೀಸರ್ ಬಿಡುಗಡೆಯಾಗಲಿದೆ.

Advertisement
Tags :
Advertisement