ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೀಮ್ ಇಂಡಿಯಾಗೆ ಶಾಕ್: 3ನೇ ಟೆಸ್ಟ್​ನಿಂದ ಹೊರಗುಳಿದ ರವಿಚಂದ್ರನ್ ಅಶ್ವಿನ್

ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಿಂದ  ಟೀಮ್ ಇಂಡಿಯಾದ ಹಿರಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್  ಹೊರಗುಳಿದಿದ್ದಾರೆ.
07:49 AM Feb 17, 2024 IST | Ashika S

ರಾಜ್​ಕೋಟ್: ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಿಂದ  ಟೀಮ್ ಇಂಡಿಯಾದ ಹಿರಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್  ಹೊರಗುಳಿದಿದ್ದಾರೆ.

Advertisement

ಪಂದ್ಯದ 2ನೇ ದಿನದಾಟದಲ್ಲಿ ಕಾಣಿಸಿಕೊಂಡಿದ್ದ ಅಶ್ವಿನ್ ದಿಢೀರ್ ಮನೆಗೆ ವಾಪಾಸ್ಸಾಗಿದ್ದಾರೆ. ಅಶ್ವಿನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದ ಉಳಿದ ದಿನದಾಟಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

2ನೇ ದಿನದಾಟದ ಮುಕ್ತಾಯದ ಬೆನ್ನಲ್ಲೇ ಅಶ್ವಿನ್ ಟೀಮ್ ಇಂಡಿಯಾವನ್ನು ತೊರೆದಿದ್ದಾರೆ. ಕುಟುಂಬದ ತುರ್ತುಪರಿಸ್ಥಿತಿಯಿಂದಾಗಿ ಅವರು ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಶುಕ್ರವಾರ ನಡೆದ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ್ದ ಅಶ್ವಿನ್ 37 ರನ್​ಗಳಿಸಿ ಮಿಂಚಿದ್ದರು.

Advertisement
Tags :
CRICAKETLatestNewsNewsKannadaಟೀಮ್‌ ಇಂಡಿಯಾಟೆಸ್ಟ್ ಪಂದ್ಯರವಿಚಂದ್ರನ್ ಅಶ್ವಿನ್
Advertisement
Next Article