For the best experience, open
https://m.newskannada.com
on your mobile browser.
Advertisement

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ 4 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
11:17 PM May 04, 2024 IST | Ashika S
ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಬೆಂಗಳೂರು: ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ 4 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

Advertisement

ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಗುಜರಾತ್ ತಂಡ 19.3 ಓವರ್‌ಗಳಿಗೆ 147 ರನ್ ಗಳಿಸುವ ಮೂಲಕ ಆಲೌಟ್ ಆಗಿ ಆರ್‌ಸಿಬಿ ತಂಡಕ್ಕೆ 148 ರನ್‌ಗಳ ಗುರಿ ನೀಡಿತು.

ಗುಜರಾತ್​ ನೀಡಿದ 147 ರನ್ ಗುರಿ ಬೆನ್ನತ್ತಿದ ಆರ್​​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 10 ಫೋರ್​ ಸಮೇತ 64 ರನ್​ ಸಿಡಿಸಿದ್ರು.

Advertisement

ಫಾಫ್​ ಬ್ಯಾಟಿಂಗ್​ ಮಾಡುವಾಗ ಸ್ಟ್ರೈಕ್​ ರೇಟ್​ ಬರೋಬ್ಬರಿ 280 ಇತ್ತು. ಇವರಿಗೆ ಸಾಥ್​ ನೀಡಿದ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೇವಲ 27 ಬಾಲ್​ನಲ್ಲಿ 4 ಸಿಕ್ಸರ್​​, 2 ಫೋರ್​ ಸಮೇತ 42 ರನ್​ ಚಚ್ಚಿದ್ರು. ದಿನೇಶ್​ ಕಾರ್ತಿಕ್​ 12 ಬಾಲ್​ನಲ್ಲಿ 3 ಫೋರ್​ ಸಮೇತ 21 ರನ್​ ಮತ್ತು ಸ್ವಪ್ನಿಲ್​ ಸಿಂಗ್​ 15 ರನ್​ ಗಳಿಸಿದ್ರು. ಆರ್​​ಸಿಬಿ ಕೇವಲ 13.4 ಓವರ್​ನಲ್ಲೇ 6 ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿ ಗೆದ್ದಿದೆ.

ಇನ್ನು, ಟಾಸ್​ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್​ ಟೈಟನ್ಸ್​ ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಮತ್ತು ವೃದ್ದಿಮಾನ್ ಸಾಹಾ ಕ್ರೀಸ್‌ಗಿಳಿದಿದ್ದರು. ವೃದ್ದಿಮಾನ್ ಸಾಹಾ 7 ಎಸೆತಗಳಿಗೆ ಕೇವಲ 1 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಕೂಡ 2 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ ಮತ್ತೊಂದು ವಿಕೆಟ್ ಬಿಟ್ಟುಕೊಟ್ಟರು. ಸ್ಟಾರ್ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ 14 ಎಸೆತಗಳಿಗೆ 6 ರನ್‌ಗಳಿಸಿ ಔಟಾಗುವ ಮೂಲಕ ಗುಜರಾತ್ ಮತ್ತೊಂದು ವಿಕೆಟ್ ಕಳೆದುಕೊಂಡಿತು.

ಬಳಿಕ ಬಂದ ಡೇವಿಡ್ ಮಿಲ್ಲರ್ 20 ಬಾಲ್‌ಗಳಿಗೆ 30 ರನ್ ಗಳಿಸಿ ತಮ್ಮ ಆಟ ಮುಗಿಸಿದರು. ಶಾರುಖ್ ಖಾನ್ 24 ಎಸೆತಗಳಿಗೆ 37 ರನ್ ಗಳಿಸಿ ರನೌಟ್ ಆದರು. ಡೇವಿಡ್ ಮಿಲ್ಲರ್ ಹಾಗೂ ಶಾರುಖ್ ಖಾನ್ ಜೊತೆಯಾಟವಾಡಿ 67 ರನ್ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು.

ರಶೀದ್ ಖಾನ್ 14 ಬಾಲ್‌ಗಳಿಗೆ 18 ರನ್ ಗಳಿಸಿ ಔಟಾಗುವ ಪೆವಿಲಿಯನ್‌ಗೆ ಮರಳಿದರು. ರಾಹುಲ್ ತೆವಾಟಿಯ 21 ಬಾಲ್‌ಗಳಿಗೆ 35 ರನ್‌ಗಳಿಸಿ 7ನೇ ವಿಕೆಟ್ ಬಿಟ್ಟುಕೊಟ್ಟರು. ವಿಜಯ್ ಶಂಕರ್ ಕೊನೆಯ ಓವರ್‌ನಲ್ಲಿ 10 ರನ್ ಗಳಿಸಿ ಔಟಾಗಿ ಆಟ ಮುಗಿಸಿದರು.

Advertisement
Tags :
Advertisement