ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್​ಸಿಬಿ ತಂತ್ರಗಾರಿಕೆ ವಿರುದ್ಧ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಬೇಸರ

ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್​ನ ಮಾಜಿ ನಾಯಕ ಅನಿಲ್ ಕುಂಬ್ಳೆ ಆರ್​ಸಿಬಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆ ವಿಚಾರದಲ್ಲಿ ಆರ್​ಸಿಬಿ ಮಾಡಿದ ತಂತ್ರಗಾರಿಗೆ ಸರಿ ಇಲ್ಲ ಎಂದಿದ್ದಾರೆ.
11:26 AM Dec 20, 2023 IST | Ashitha S

ಮುಂಬೈ: ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್​ನ ಮಾಜಿ ನಾಯಕ ಅನಿಲ್ ಕುಂಬ್ಳೆ ಆರ್​ಸಿಬಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರ ಆಯ್ಕೆ ವಿಚಾರದಲ್ಲಿ ಆರ್​ಸಿಬಿ ಮಾಡಿದ ತಂತ್ರಗಾರಿಗೆ ಸರಿ ಇಲ್ಲ ಎಂದಿದ್ದಾರೆ.

Advertisement

ನಿನ್ನೆ ದುಬೈನ Coca-Cola Arenaದಲ್ಲಿ ಐಪಿಎಲ್ ಮಿನಿ ಹರಾಜು ನಡೆಯಿತು. ಈ ಪ್ರಕ್ರಿಯೆಯಲ್ಲಿ ಆರ್​ಸಿಬಿ ಆಟಗಾರರನ್ನು ಸರಿಯಾಗಿ ಆಯ್ಕೆ ಮಾಡಲಿಲ್ಲ. ಐಪಿಎಲ್ 2024 ರ ಹರಾಜಿನಲ್ಲಿ ಆರ್‌ಸಿಬಿ ಪ್ರದರ್ಶನದ ರೇಟಿಂಗ್ ಸರಿ ಇಲ್ಲ. ಏಕೆಂದರೆ ಅವರು ರಿಲೀಸ್ ಮಾಡಿರುವ ಆಟಗಾರರಿಗೆ ಸಮನಾಗಿ ಬದಲಾಯಿಸಲು ಆರ್‌ಸಿಬಿ ಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಹರಾಜಿನಲ್ಲಿ ರಿಲೀಸ್ ಮಾಡಿರುವ ಆಟಗಾರಗಿಂತ ಚೆನ್ನಾಗಿ ಪ್ರದರ್ಶನ ನೀಡುವ ಪ್ಲೇಯರ್ಸ್ ಆಯ್ಕೆ ಮುಖ್ಯವಾಗಿರುತ್ತದೆ. ಆರ್​ಸಿಬಿ ಹಸರಂಗ, ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಅವರಂಥ ಬೌಲರ್ಸ್ ಬಿಡುಗಡೆ ಮಾಡಿದೆ. ಅವರಿಗಿಂತ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

Advertisement

ಆರ್​ಸಿಬಿಗೆ ಸ್ಪಿನ್ ಬೌಲರ್ಸ್​ ಅಗತ್ಯ ಇದೆ. ಅವರಲ್ಲಿ ಯಾವುದೇ ಸ್ಪಿನ್ನರ್ಸ್​ ಇಲ್ಲ.ಕಳೆದ ಋತುವಿನಲ್ಲಿ ಅಷ್ಟೇನೂ ಚೆನ್ನಾಗಿ ಆಡದ ಕರ್ಣ್ ಶರ್ಮಾ ಮೇಲೆ ಹೆಚ್ಚು ಒಲವು ತೋರಬೇಕಾಗುತ್ತದೆ. ಅವರು ಇಂಪ್ಯಾಕ್ಟ್ ಬೌಲರ್ ಆಗಿದ್ದರು. ಆದರೆ ಅವರು ಎಲ್ಲಾ ಪಂದ್ಯಗಳನ್ನು ಆಡಲಿಲ್ಲ. ಆದ್ದರಿಂದ ಸ್ಪಿನ್ನರ್ ಇಲ್ಲದೆ ಇದು ಸುಲಭವಲ್ಲ. ಹಾಗಾಗಿ ಹರಾಜು ವೇಳೆ ಆಟಗಾರರ ಖರೀದಿ ಸರಿ ಇದೆ ಎಂದು ನಾನು ಭಾವಿಸಲ್ಲ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

Advertisement
Tags :
Coca-Cola ArenaIPLIPL2024LatestNewsNewsKannadaಅನಿಲ್ ಕುಂಬ್ಳೆಆರ್​ಸಿಬಿನವದೆಹಲಿಬೆಂಗಳೂರು
Advertisement
Next Article