ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್‌ಸಿಬಿ ಮುಂದಿದೆ ಪ್ಲೇಆಫ್‌ಗೆ ನೇರ ಎಂಟ್ರಿ ಅವಕಾಶ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲಾರ್ಧದಲ್ಲಿ ಸೋಲನ್ನು ಕಂಡಿರುವ ಆರ್‌ಸಿಬಿ ತಂಡಕ್ಕೆ ಇನ್ನು ಒಂದು ಅವಕಾಶ ಅವರ ಮುಂದಿದೆ. ಏಪ್ರಿಲ್ 21 ರಂದು ನಡೆಯಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ದ್ವಿತೀಯಾರ್ಧವನ್ನು ಆರಂಭಿಸಲಿದೆ.ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ಗೇರಲು ಆರ್​ಸಿಬಿ ಮೊದಲ ಹೆಜ್ಜೆಯನ್ನಿಡುವ ವಿಶ್ವಾಸದಲ್ಲಿದೆ.
03:37 PM Apr 17, 2024 IST | Nisarga K
ಆರ್‌ಸಿಬಿ ಮುಂದಿದೆ ಪ್ಲೇಆಫ್‌ಗೆ ನೇರ ಎಂಟ್ರಿ ಅವಕಾಶ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲಾರ್ಧದಲ್ಲಿ ಸೋಲನ್ನು ಕಂಡಿರುವ ಆರ್‌ಸಿಬಿ ತಂಡಕ್ಕೆ ಇನ್ನು ಒಂದು ಅವಕಾಶ ಅವರ ಮುಂದಿದೆ. ಏಪ್ರಿಲ್ 21 ರಂದು ನಡೆಯಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ದ್ವಿತೀಯಾರ್ಧವನ್ನು ಆರಂಭಿಸಲಿದೆ.ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ಗೇರಲು ಆರ್​ಸಿಬಿ ಮೊದಲ ಹೆಜ್ಜೆಯನ್ನಿಡುವ ವಿಶ್ವಾಸದಲ್ಲಿದೆ.

Advertisement

ಆರ್‌ಸಿಬಿ ತಂಡ ದ್ವಿತೀಯಾರ್ಧದ ಮೂಲಕ ನೇರವಾಗಿ ಪ್ಲೇಆಫ್​ಗೇರಲು ಅವಕಾಶ ಹೊಂದಿದೆ.ಅಂದರೆ ಮುಂದಿನ 7 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದರೆ, 8 ಗೆಲುವುಗಳೊಂದಿಗೆ ಒಟ್ಟು 16 ಅಂಕಗಳನ್ನು ಪಡೆದುಕೊಳ್ಳಲಿದೆ. 16 ಅಂಕಗಳು ಬಂದರೆ ಟಾಪ್‌ 4 ರಲ್ಲಿ ಆರ್‌ಸಿಬಿ ಕಾಣಿಸಿಕೊಳ್ಳಲಿದೆ.

ಇನ್ನು 7 ಪಂದ್ಯಗಳಲ್ಲಿ ಆರ್​ಸಿಬಿ ಒಂದು ಪಂದ್ಯವನ್ನು ಸೋತರೂ 14 ಅಂಕಗಳನ್ನು ಕಲೆಹಾಕಲು ಅವಕಾಶವಿದೆ. ಇಲ್ಲಿ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ 2 ತಂಡಗಳು 18 ಅಥವಾ 20 ಅಂಕಗಳನ್ನು ಪಡೆದುಕೊಂಡರೆ, ಅದರಲ್ಲಿ ತಂಡವೊಂದು 14 ಅಂಕ ಪಡೆದು ನಾಲ್ಕನೆ ಪಟ್ಟಿಯಲ್ಲಿ ಬರುವ ಸಾಧ್ಯತೆ ಇರುತ್ತದೆ ಹಾಗೂ ಪ್ಲೇಆಫ್​ಗೆ ನೇರವಾಗಿ ಹೋಗಉವ ಅವಕಾಶ ದೊರೆಯುತ್ತದೆ.

Advertisement

ಹಾಗಾಗಿ ಈ ಬಾರಿಯ ದ್ವಿತೀಯಾರ್ಧದಲ್ಲಿ ಛಲಬಿಡದೆ ಆಡಿದರೆ ಆರ್‌ಸಿಬಿ ನೇರವಾಗಿ ಪ್ಲೇಆಫ್​ಗೇರಲು ಅವಕಾಶ ಇದೆ.

ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಕೊಲ್ಕತ್ತಾ ನೈಟ್ ರೈಡರ್ಸ್, ಸನ್​ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ (2 ಪಂದ್ಯಗಳು), ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್​ಗೇರುವ ಭರವಸೆಯಲ್ಲಿದೆ.

Advertisement
Tags :
cricketCRICKET MATCHentryLatestNewsNewsKarnatakaplayoffsRCB
Advertisement
Next Article