For the best experience, open
https://m.newskannada.com
on your mobile browser.
Advertisement

ಬಲೆಗಳನ್ನು ನಿರ್ಮಿಸುವ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ?

ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ.
09:46 AM Feb 28, 2024 IST | Ashitha S
ಬಲೆಗಳನ್ನು ನಿರ್ಮಿಸುವ ಜೇಡಗಳ ಕಾಟದಿಂದ ತಪ್ಪಿಸುಕೊಳ್ಳೋದು ಹೇಗೆ ಗೊತ್ತಾ

ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ.

Advertisement

ಜೇಡಗಳಿಗೆ ಘಾಟಿ ವಾಸನೆ ಆಗಿಬರುವುದಿಲ್ಲ. ಸಿಟ್ರಿಕ್‌ ಹಣ್ಣುಗಳಲ್ಲಿ ತುಂಬಾ ಘಾಟಿನ ವಾಸನೆ ಇರುತ್ತದೆ. ಹಾಗಾಗಿ ಸಿಟ್ರಿಕ್‌ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಜೇಡ ಇರುವ ಜಾಗಕ್ಕೆ ಉಜ್ಜಿದರೆ ಜೇಡಗಳು ಅಲ್ಲಿಂದ ಮಾಯವಾಗುತ್ತವೆ.

ಗೊಂಡಂಬಿ ವಾಸನೆ ಜೇಡಗಳಿಗೆ ಒಗ್ಗುವುದಿಲ್ಲವಂತೆ, ಹಾಗಾಗಿ ಗೋಡಂಬಿ ಬೀಜಗಳನ್ನು ಮನೆಯ ಅಲ್ಲಲ್ಲಿ ಮೂಲೆಗಳಲ್ಲಿ ಇರಿಸಿದರೆ ಜೇಡಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲವಂತೆ.

Advertisement

ಬೆಳ್ಳುಳ್ಳಿ ಸಹ ಜೇಡ ಹುಳಿಗಳನ್ನು ಹೋಗಲಾಡಿಸಲು ಅತ್ಯಂತ ಉತ್ತಮ ಸಾಧನವಾಗಿದೆ. ಬೆಳ್ಳುಳ್ಳಿ ಜಜ್ಜಿ ಜೇಡ ಕಾಣಿಸಿಕೊಳ್ಳುವ ಜಾಗಕ್ಕೆ ಇಟ್ಟರೆ ಜೇಡಗಳು ಆ ಕಡೆ ಸುಳಿಯುವುದಿಲ್ಲ. ಹಾಗು ನೀರಿಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ಛಾವಣಿಗೆ ಸ್ಪ್ರೇ ಮಾಡಿದರೆ ಜೇಡ ಬಲೆ ಕಟ್ಟೋದನ್ನು ನಿಲ್ಲಿಸಿಬಿಡುತ್ತದೆ.

ಜೇಡರ ಬಲೆಗಳಿರುವ ಮನೆಯ ಮೂಲೆಯಲ್ಲಿ ನಕಾರಾತ್ಮಕ ಶಕ್ತಿ ಸಂಗ್ರಹವಾಗುತ್ತದೆ. ಮನೆಯಲ್ಲಿ ಆಂತರಿಕ ಅಪಶ್ರುತಿ, ರೋಗಗಳು ಮತ್ತು ಇತರ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮನೆಗಳಲ್ಲಿ ಜೇಡರ ಬಲೆ ಇರುವುದರಿಂದ ಮನೆಯ ಪರಿಸರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕೆಲಸದಲ್ಲಿ ಏಕಾಗ್ರತೆ ಸಾಧ್ಯವಾಗದೇ ಇರಬಹುದು. ಇದೇ ಕಾರಣಕ್ಕೆ ಮನೆಯ ಮೂಲೆಗಳಲ್ಲಿ ಇರುವ ಜೇಡರ ಬಲೆಯನ್ನು ತೆಗೆಯಬೇಕು ಎಂದು ಹಿರಿಯರು ಹೇಳುತ್ತಾರೆ.

Advertisement
Tags :
Advertisement