ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿವೃತ್ತ ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ: ಮೂವರ ಬಂಧನ

ತಾಲ್ಲೂಕಿನ ಮಿರಖಲ ಗ್ರಾಮದಲ್ಲಿ ತೆರೆದ ಬಾವಿಗೆ ಬಿದ್ದು ನಿವೃತ್ತ ಸಿಆರ್‌ಪಿಎಫ್‌ ಯೋಧ ಶರಣಬಸಪ್ಪ ಪೂಜಾರಿ (59) ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
10:42 AM Feb 14, 2024 IST | Ashika S

ಹುಲಸೂರ: ತಾಲ್ಲೂಕಿನ ಮಿರಖಲ ಗ್ರಾಮದಲ್ಲಿ ತೆರೆದ ಬಾವಿಗೆ ಬಿದ್ದು ನಿವೃತ್ತ ಸಿಆರ್‌ಪಿಎಫ್‌ ಯೋಧ ಶರಣಬಸಪ್ಪ ಪೂಜಾರಿ (59) ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಶರಣಬಸಪ್ಪ ಪೂಜಾರಿ ಅವರು ಕಲಬುರಗಿ ಜಿಲ್ಲೆಯ ಕುರಿಕೋಟಾ ಗ್ರಾಮದವರು.

ಅವರನ್ನು ಕೆಲವರು ಅಪಹರಿಸಿ ಮಿರಖಲ ಗ್ರಾಮಕ್ಕೆ ಬಂದು ಕೂಡಿ ಹಾಕಿದ್ದರು. ಅವರು ಅಲ್ಲಿಂದ ಬಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಶರಣಬಸಪ್ಪ ಅವರ ಪತ್ನಿ ಅವ್ವಮ್ಮ ಹುಲಸೂರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

Advertisement

ಘಟನೆಗೆ ಸಂಬಂಧಿಸಿ ಆರೋಪಿಗಳಾದ ಅನಿಲಕುಮಾರ ರಾಮತೀರ್ಥ, ಅರ್ಜುನ ಕೃಷ್ಣಾಜಿ, ಭೀಮರಾವ ಮೂಳೆ ಅವರನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ನಾಗೇಂದ್ರ ತಿಳಿಸಿದ್ದಾರೆ.

ಘಟನೆಯ ವಿವರ: 'ಶರಣಬಸಪ್ಪ ಅವರು 124 ಎಕರೆ ಜಮೀನು ಕೊಡಿಸುತ್ತೇನೆ ಎಂದು ತಮ್ಮಿಂದ ₹ 12 ಲಕ್ಷ ಪಡೆದಿದ್ದು, ಜಮೀನು ಕೊಡಿಸಿಲ್ಲ. ಹಣವೂ ಮರಳಿ ನೀಡದ ಕಾರಣ ಮಹಾಗಾಂವ ಕ್ರಾಸ್‌ನಿಂದ ಅಪಹರಿಸಿದ್ದೇವೆ ಎಂದು ಆರೋಪಿ ಅನಿಲ ರಾಮತೀರ್ಥ ಅವರು ಶರಣಬಸಪ್ಪ ಪತ್ನಿ ಅವ್ವಮ್ಮಗೆ ಕರೆ ಮಾಡಿದ್ದರು. ಹಣ ವಾಪಸ್ ಮಾಡಲು ತಿಳಿಸಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಹೊಂದಿಸಿಕೊಡುತ್ತೇನೆ ಎಂದಾಗ ಅನಿಲ ಕರೆ ಕಟ್ ಮಾಡಿದ್ದಾರೆ. ಫೆಬ್ರುವರಿ 9ರಂದು ತಾನು ಮತ್ತು ತನ್ನ ಮಕ್ಕಳು ಮಿರಖಲ ಗ್ರಾಮಕ್ಕೆ ಶರಣಬಸಪ್ಪ ಅವರನ್ನು ಕರೆತರಲು ಹೋದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ' ಎಂದು ಅವ್ವಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
LatetsNewsNewsKannadaಆತ್ಮಹತ್ಯೆಯೋಧಸಿಆರ್‌ಪಿಎಫ್‌
Advertisement
Next Article