ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯುಕೋ ಬ್ಯಾಂಕ್​ ಖಾತೆದಾರರಿಗೆಗಿ ₹820 ಕೋಟಿ ಜಮೆ ಕೇಸ್: ಮಂಗಳೂರು ಸೇರಿ 13 ಕಡೆ ಸಿಬಿಐ ದಾಳಿ‌

ಯುಕೋ ಬ್ಯಾಂಕ್​ನ ಖಾತೆದಾರರಿಗೆ 820. ಕೋಟಿ ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೇರಿ ದೇಶದ ಹಲವಡೆ ಸಿಬಿಐ ದಾಳಿ ನಡೆಸಿದೆ. ಮಂಗಳೂರು, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ನಗರಗಳ 13 ಕಡೆ ದಾಳಿ ಮಾಡಿದೆ.
10:16 PM Dec 05, 2023 IST | Ramya Bolantoor

ಮಂಗಳೂರು: ಯುಕೋ ಬ್ಯಾಂಕ್​ನ ಖಾತೆದಾರರಿಗೆ 820. ಕೋಟಿ ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೇರಿ ದೇಶದ ಹಲವಡೆ ಸಿಬಿಐ ದಾಳಿ ನಡೆಸಿದೆ. ಮಂಗಳೂರು, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ನಗರಗಳ 13 ಕಡೆ ದಾಳಿ ಮಾಡಿದೆ.

Advertisement

ನವೆಂಬರ್​ ತಿಂಗಳಲ್ಲಿ ಐಎಂಪಿಎಸ್ ಮೂಲಕ ಯುಕೋ ಬ್ಯಾಂಕ್​ನ 41 ಸಾವಿರ ಖಾತೆದಾರರಿಗೆ 820 ಕೋಟಿ ರೂ.ಗಳ ಹಣ ಜಮೆ ಆಗಿತ್ತು. ಬ್ಯಾಂಕ್​ನೊಂದಿಗೆ ಕಾರ್ಯನಿರ್ವಹಿಸುವ ಇಬ್ಬರು ಇಂಜಿನಿಯರ್​ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್​ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿ ಸಿಬಿಐ ತನಿಖೆ ನಡೆಸಿದೆ.

ನ.10 ಮತ್ತು 13ರ ಮಧ್ಯೆ 8.53 ಲಕ್ಷಕ್ಕೂ ಹೆಚ್ಚು ಐಎಂಪಿಎಸ್ ವಹಿವಾಟು ಆಗಿದೆ. ಯುಕೋ ಬ್ಯಾಂಕ್​ನ ಹಲವಾರು ಗ್ರಾಹಕರು ಈ ವಹಿವಾಟಿನ ಲಾಭ ಪಡೆದು ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಹೀಗಾಗಿ ಮಂಗಳೂರು ಸೇರಿ ದೇಶದ ಹಲವು ಯುಕೋ ಬ್ಯಾಂಕ್ ಶಾಖೆಗಳಿಗೆ ದಾಳಿ ಮಾಡಿದೆ.

Advertisement

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳು ವಶ ಪಡೆದುಕೊಂಡಿದ್ದಾರೆ.

Advertisement
Tags :
CCBKARNATAKALatestNewsNewsKannadaRAIDಮಂಗಳೂರು
Advertisement
Next Article