ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ತಿಥಿ

ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.
11:57 AM Dec 30, 2023 IST | Ashika S

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು ಅವರ ಅಭಿಮಾನಿಗಳು ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಪೂಜೆ ನೆರವೇರಿಸಿದ್ದಾರೆ.

Advertisement

ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನದಂಥ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಪೂಜೆ ಮತ್ತು ದೀಪೋತ್ಸವದಂತಹ ಕಾರ್ಯಗಳು ನಡೆಯಲಿವೆ.

ವಿಷ್ಣುವರ್ಧನ್ ಅಂತ್ಯಕ್ರಿತೆ ಮಾಡಿದ್ದ ಶ್ರೀಧರ್ ಅವರು ಮಾತನಾಡಿದ್ದಾರೆ. ‘ಸಮಾಧಿ ಇಲ್ಲೇ ಆಗಬೇಕು ಎಂದು ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಅವರು ಹತ್ತು ಗುಂಟೆ ಜಾಗ ಕೊಡಬೇಕು. ಅಣ್ಣನ ಅಂತ್ಯಸಂಸ್ಕಾರ ಇಲ್ಲೇ ಆಗಿರೋದು. ಹೀಗಾಗಿ ಅವರು ಇಲ್ಲೇ ಇರಬೇಕು. ಎಲ್ಲಾ ಅಭಿಮಾನಿಗಳು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಧರ್ ಕರೆ ನೀಡಿದ್ದಾರೆ.

Advertisement

ಅಭಿಮಾನಿಗಳು ಬಂದು ವಿಷ್ಣುವರ್ಧನ್ ಸಮಾಧಿ ಬಳಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್​ಆರ್​ಪಿ ತುಕಡಿ ಸ್ಥಳದಲ್ಲಿದೆ. ಅಭಿಮಾನಿಗಳು ಗಲಾಟೆ ಹಾಗು ಪ್ರತಿಭಟನೆ ಮಾಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ.ಇತ್ತೀಚೆಗೆ ವಿಷ್ಣುವರ್ಧನ್ ಅಭಿಮಾನಿ ಸಂಘದವರು ಕರ್ನಾಟಕ ಫಿಲ್ಮ್​ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದರು. ವಿಷ್ಣುವರ್ಧನ್ ವಿಚಾರದಲ್ಲಿ ಚಲನಚಿತ್ರ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದರು.

Advertisement
Tags :
LatetsNewsNewsKannadaಅಂತ್ಯಕ್ರಿಯೆಅಭಿಮಾನ್ ಸ್ಟುಡಿಯೋಪುಣ್ಯ ತಿಥಿಪೂಜೆವಿಷ್ಣುವರ್ಧನ್ಸಾಹಸಸಿಂಹ
Advertisement
Next Article