For the best experience, open
https://m.newskannada.com
on your mobile browser.
Advertisement

1 ಗಂಟೆಯಲ್ಲಿ 50 ಸಾವಿರ "ಸಲಾರ್" ಟಿಕೆಟ್​​ ಸೋಲ್ಡ್​ಔಟ್: ಅಭಿಮಾನಿ ಸಾವು

ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾ ಇಂದು ರಿಲೀಸ್​ ಆಗಿದೆ. ಪ್ರೇಕ್ಷಕ ಮಹಾಪ್ರಭುಗಳ ಮನಗೆದ್ದಿರುವ ಈ ಸಿನಿಮಾವನ್ನು ಸಕ್ಸಸ್​ನತ್ತ ಮುನ್ನುಗ್ಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೊದಲ ದಿನ 48 ಕೋಟಿಯಷ್ಟು ಅಂದಾಜು ಕಲೆಕ್ಷನ್​ ಮಾಡಲಿದೆ ಎಂದು ಹೇಳಲಾಗುತ್ತಿದೆ.
01:54 PM Dec 22, 2023 IST | Ashitha S
1 ಗಂಟೆಯಲ್ಲಿ 50 ಸಾವಿರ  ಸಲಾರ್  ಟಿಕೆಟ್​​ ಸೋಲ್ಡ್​ಔಟ್  ಅಭಿಮಾನಿ ಸಾವು

ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾ ಇಂದು ರಿಲೀಸ್​ ಆಗಿದೆ. ಪ್ರೇಕ್ಷಕ ಮಹಾಪ್ರಭುಗಳ ಮನಗೆದ್ದಿರುವ ಈ ಸಿನಿಮಾವನ್ನು ಸಕ್ಸಸ್​ನತ್ತ ಮುನ್ನುಗ್ಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಮೊದಲ ದಿನ 48 ಕೋಟಿಯಷ್ಟು ಅಂದಾಜು ಕಲೆಕ್ಷನ್​ ಮಾಡಲಿದೆ ಎಂದು ಹೇಳಲಾಗುತ್ತಿದೆ.

Advertisement

ಪ್ರಭಾಸ್​​ ಫ್ಯಾನ್ಸ್​ಗಳಂತು ಸಲಾರ್​ ಸಿನಿಮಾ ಕಂಡು ಸಂತಸಗೊಂಡಿದ್ದಾರೆ. ನಟನನ್ನು ವಿಭಿನ್ನ ಗೆಟಪ್​ನಲ್ಲಿ ಕಂಡು ಕೊಂಡಾಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಕೆಜಿಎಫ್​ ಸಿನಿಮಾಗಿಂತಲೂ ನಿರೀಕ್ಷೆಯನ್ನು ಮೀರಿಸಿದೆ. ಹೀಗಾಗಿ ಥೀಯೆಟರ್‌ ಹೌಸ್‌ ಫುಲ್ ಆಗಿದೆ.

ಇನ್ನು ಬುಕ್​ ಮೈ ಶೋ ಹಂಚಿಕೊಂಡ ಮಾಹಿತಿ ಪ್ರಕಾರ, ಕಳೆದ 1 ಗಂಟೆಯಲ್ಲಿ ಬುಕ್​ ಮೈ ಶೋ 50 ಸಾವಿರ ಟಿಕೆಟ್​ಗಳು ಮಾರಾಟವಾಗಿದೆ ಎಂಬ ಮಾಹಿತಿ ಹಂಚಿಕೊಂಡಿದೆ.

Advertisement

ಇನ್ನು ಇತ್ತ ಇದೇ ಸಂದರ್ಭದಲ್ಲಿ ಅನಾಹುತವೊಂದು ಸಂಭವಿಸಿದೆ. ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆ ವೇಳೆ ವಿದ್ಯುತ್ ಶಾಕ್ ತಗುಲಿ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ (ಡಿ.21) ಪಟ್ಟಣದ ರಂಗ ಥಿಯೇಟರ್ ಮುಂಭಾಗದ ಮನೆಯೊಂದರಲ್ಲಿ ಫ್ಲೆಕ್ಸ್​ ತೊಳೆಯುತ್ತಿದ್ದಾಗ ನಾಯಕ ಪ್ರಭಾಸ್ಅಭಿಮಾನಿ ಬಾಲರಾಜು (27) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಬಾಲರಾಜು ಅವರು ತಮ್ಮ ನೆಚ್ಚಿನ ನಟ ಪ್ರಭಾಸ್​ ಅಭಿನಯದ ‘ಸಲಾರ್’ ಚಿತ್ರ ನೋಡಲು ಕಾದಿದ್ದರು. ಅವರ ಸ್ನೇಹಿತರು ಫ್ಲೆಕ್ಸ್​ ಫ್ರೇಮ್ ಮಾಡಿ ತೊಳೆದಾಗ ಫ್ರೇಮ್‌ನ ಕಬ್ಬಿಣದ ರಾಡ್ ಮನೆಯ ವಿದ್ಯುತ್​ ವೈರ್‌ಗಳಿಗೆ ತಗುಲಿದಾಗ ಅವಘಡ ಸಂಭವಿಸಿದೆ.

Advertisement
Tags :
Advertisement