For the best experience, open
https://m.newskannada.com
on your mobile browser.
Advertisement

ಬಹುನಿರೀಕ್ಷಿತ "ಸಲಾರ್‌" ರಿಲೀಸ್‌: ಭರ್ಜರಿ ರೆಸ್ಪಾನ್ಸ್

ಪ್ಯಾನ್ ಇಂಡಿಯಾದಲ್ಲಿ ಸಲಾರ್ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಲಾರ್​ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.
09:09 AM Dec 22, 2023 IST | Ashitha S
ಬಹುನಿರೀಕ್ಷಿತ  ಸಲಾರ್‌  ರಿಲೀಸ್‌  ಭರ್ಜರಿ ರೆಸ್ಪಾನ್ಸ್

ಪ್ಯಾನ್ ಇಂಡಿಯಾದಲ್ಲಿ ಸಲಾರ್ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಲಾರ್​ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

Advertisement

ಹೊಂಬಾಳೆ ನಿರ್ಮಾಣದ ಮತ್ತೊಂದು ಹೈ ಬಜೆಟ್​ ಚಿತ್ರ ಇದಾಗಿದ್ದು, 270 ಕೋಟಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಗಣ್ಯರು ಚಿತ್ರದಲ್ಲಿ ಆ್ಯಕ್ಟ್​ ಮಾಡಿದ್ದು, ರವಿ ಬಸ್ರೂರು ಮ್ಯೂಸಿಕ್ ಚಿತ್ರದಲ್ಲಿ ಮೋಡಿ ಮಾಡಿದೆ.  ಇನ್ನು, ಸಲಾರ್​ ಸಿನಿಮಾ ನೋಡಿದ ಸಿನಿ ಪ್ರೇಮಿಗಳಂತು ಫುಲ್ ಫಿದಾ ಆಗಿದ್ದಾರೆ.

ಕನ್ನಡಿಗರು ಸಹ ಚಿತ್ರವನ್ನು ಮೆಚ್ಚಿಕೊಂಡಿದ್ದು, ಇದು ಉಗ್ರಂ ರಿಮೇಕ್ ಅಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಉಗ್ರಂಗೂ ಮತ್ತು ಸಲಾರ್​ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣ ಭಿನ್ನ ಕಥೆಯುಳ್ಳ ಸಿನಿಮಾ ಎಂದಿದ್ದಾರೆ.

Advertisement

ಸೋಶಿಯಲ್ ಮೀಡಿಯಾದಲ್ಲಿ ಸಲಾರ್ ಚಿತ್ರದ ಮೀಮ್ಸ್, ಥಿಯೇಟರ್ ಮುಂದೆ ಸೇರಿರುವ ಜನರ ವಿಡಿಯೋಗಳು ವೈರಲ್ ಆಗುತ್ತಿವೆ. ಬಾಹುಬಲಿ ಬಳಿಕ ಪ್ರಭಾಸ್​ಗೆ ಇದೊಂದು ಒಳ್ಳೆಯ ಕಮ್​ ಬ್ಯಾಕ್ ಸಿನಿಮಾ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ಮೂಲಕ ಕೆಜಿಎಫ್​ ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಶಾಂತ್ ನೀಲ್ ಸಕ್ಸಸ್​ ಆಗಿದ್ದಾರೆ.

Advertisement
Tags :
Advertisement