For the best experience, open
https://m.newskannada.com
on your mobile browser.
Advertisement

ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ 'ಸಲಾರ್' ಬಿಡುಗಡೆ ಇಲ್ಲ: ಏನಿದು ಸಂಕಷ್ಟ

ಮಲ್ಟಿಪ್ಲೆಕ್ಸ್​ಗಳ ತಾರತಮ್ಯ ನೀತಿಗೆ ವಿರೋಧವಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯು ತಮ್ಮ ಬಹುಕೋಟಿ ಬಜೆಟ್​ನ ‘ಸಲಾರ್’ ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ (ಪಿವಿಆರ್, ಐನಾಕ್ಸ್, ಮಿರಾಜ್‍) ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿದೆ.
07:56 AM Dec 21, 2023 IST | Ashitha S
ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ  ಸಲಾರ್  ಬಿಡುಗಡೆ ಇಲ್ಲ  ಏನಿದು ಸಂಕಷ್ಟ

ಮಲ್ಟಿಪ್ಲೆಕ್ಸ್​ಗಳ ತಾರತಮ್ಯ ನೀತಿಗೆ ವಿರೋಧವಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯು ತಮ್ಮ ಬಹುಕೋಟಿ ಬಜೆಟ್​ನ ‘ಸಲಾರ್’ ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ (ಪಿವಿಆರ್, ಐನಾಕ್ಸ್, ಮಿರಾಜ್‍) ಬಿಡುಗಡೆ ಮಾಡದೇ ಇರಲು ನಿರ್ಧಾರ ಮಾಡಿದೆ.

Advertisement

‘ಡಂಕಿ’ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್​ಗಳನ್ನು ನೀಡಿ ‘ಸಲಾರ್’ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್ ನಿಗದಿ ಮಾಡಿದ್ದ ಮಲ್ಟಿಪ್ಲೆಕ್ಸ್​ಗಳ ತಾರತಮ್ಯದಿಂದ ಅಸಮಾಧಾನಗೊಂಡು ಹೊಂಬಾಳೆ ಫಿಲ್ಮ್ಸ್​ ಈ ನಿರ್ಧಾರ ಮಾಡಿದೆ.

‘ಡಂಕಿ’ ಸಿನಿಮಾ ಡಿಸೆಂಬರ್ 21ರ ಗುರುವಾರ ಬಿಡುಗಡೆಯಾಗುತ್ತಿದೆ. ಪ್ರಭಾಸ್ ನಟನೆಯ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದ್ದು ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟು ಏಕಪರದೆಯ ಚಿತ್ರಮಂದಿರಗಳು ಎರಡೂ ಚಿತ್ರಗಳನ್ನು ಎರಡೆರೆಡು ಪ್ರದರ್ಶನ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ‘ಡಂಕಿ’ ವಿತರಕರು ಮಾತ್ರ ತಮಗೆ ನಾಲ್ಕು ಪ್ರದರ್ಶನಗಳನ್ನು ಕೊಡುವುದಾದರೆ ಮಾತ್ರ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಅನುಮತಿ ನೀಡಲಾಗುವುದು ಎಂದಿದ್ದರು.

Advertisement

ಇತ್ತ ಇದರ ಬೆನ್ನಲ್ಲೆ ಪಿವಿಆರ್-ಐನಾಕ್ಸ್​​ನ ಸಿಇಒ ಸರಣಿ ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ, ನಾವು ನಿರ್ಮಾಪಕರಿಗೆ ಸಂಬಂಧಿಸಿದ ವಿಷಯಗಳನ್ನು ನಮ್ಮಲ್ಲೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ದೃಷ್ಟಿಕೋನವನ್ನು ಹೇಳಲೇ ಬೇಕಾಗಿ ಬಂದಿರುವ ಸಮಯವಿದು. ಪಿವಿಆರ್-ಐನಾಕ್ಸ್​ನಿಂದ ಅನ್ಯಾಯ ಮಾಡಿದೆ ಎಂಬ ಕೆಲವು ಅಸಂಬಂಧ್ಧ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಎಂದಿದ್ದಾರೆ ಪಿವಿಆರ್​-ಐನಾಕ್ಸ್ ಸಿಇಒ ಕಮಲ್ ಜ್ಞಾನ್​ಚಂದಾನಿ.

ಮುಂದುವರೆದು ಟ್ವೀಟ್ ಮಾಡಿರುವ ಜ್ಞಾನ್​ಚಂದಾನಿ, ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವ ನಿರ್ಮಾಪಕರ ಬಗ್ಗೆ ಪವಿಆರ್-ಐನಾಕ್ಸ್​ಗೆ ಇರುವಷ್ಟು ಗೌರವ ಇನ್ಯಾರಿಗೂ ಇಲ್ಲ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವ ಸಮಯದಲ್ಲಿ ವ್ಯಾಪಾರಿಕ ಭಿನ್ನಾಭಿಪ್ರಾಯಗಳು ಮೂಡುವುದು ಬಹಳ ಸಹಜ. ಇದು ಮೊದಲಲ್ಲ, ಕೊನೆಯೂ ಅಲ್ಲ ಎಂದಿದ್ದಾರೆ.

ಎಲ್ಲವೂ ಆದಷ್ಟು ಬೇಗ ಸರಿಯಾಗಲಿದೆ. ನಿಮ್ಮ ಚಿತ್ರ-ವಿಚಿತ್ರ ವಾದಗಳನ್ನು ತುಸು ಬದಿಗೆ ಇಡಿ ಎಂದು ಕಮಲ್ ಜ್ಞಾನ್​ಚಂದಾನಿ ಮನವಿ ಮಾಡಿದ್ದಾರೆ. 'ಸಲಾರ್' ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡದಿರುವ ಘೋಷಣೆ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ 'ಬ್ಯಾನ್​ಪಿವಿಆರ್​ಐನಾಕ್ಸ್' ಹ್ಯಾಷ್​ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಜನರು, ಟಿಕೆಟ್​ಗಳನ್ನು ರದ್ದು ಮಾಡಿಕೊಳ್ಳುತ್ತಿದ್ದಾರೆ. ಇತರೆ ಶೋಗಳ ಮೇಲೂ ಇದರ ಪ್ರಭಾವ ಆಗುತ್ತಿದೆ.

Advertisement
Tags :
Advertisement