For the best experience, open
https://m.newskannada.com
on your mobile browser.
Advertisement

'ಎ' ಪ್ರಮಾಣಪತ್ರ ಪಡೆದ ಪ್ರಭಾಸ್‌ ಅಭಿನಯದ 'ಸಲಾರ್ʼ

ಪ್ರಶಾಂತ್‌ ನೀಲ್‌ ಇದೀಗ 'ಸಲಾರ್‌' ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ.
05:24 PM Dec 11, 2023 IST | Ashitha S
 ಎ  ಪ್ರಮಾಣಪತ್ರ ಪಡೆದ ಪ್ರಭಾಸ್‌ ಅಭಿನಯದ  ಸಲಾರ್ʼ

ಬೆಂಗಳೂರು: ಪ್ರಶಾಂತ್‌ ನೀಲ್‌ ಇದೀಗ 'ಸಲಾರ್‌' ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಮುಂದಾಗುತ್ತಿದ್ದಾರೆ.

Advertisement

ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ ಅಭಿನಯದ 'ಸಲಾರ್‌' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಸಲಾರ್: ಭಾಗ 1' ಡಿಸೆಂಬರ್‌ 22ರಂದು ಬಿಡುಗಡೆಯಾಗಲಿದೆ. ಈಗ 'ಸಲಾರ್​' ಸಿನಿಮಾಗೆ ಸೆನ್ಸಾರ್​ ಬೋರ್ಡ್​ನಿಂದ 'ಎ' ಸರ್ಟಿಫಿಕೇಟ್​ ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

`ಎ' ಸರ್ಟಿಫಿಕೇಟ್‌ ಸಿಕ್ಕರೆ 18 ವರ್ಷಕ್ಕಿಂತ ಕಿರಿಯರು ಆ ಸಿನಿಮಾವನ್ನು ನೋಡುವಂತಿಲ್ಲ. ಇದರಿಂದ ಮಕ್ಕಳ ಜತೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗಲಿದೆ. ಹೀಗಾಗಿ ಸಲಾರ್‌ ಸಿನಿಮಾ ಉತ್ತಮ ಕಲೆಕ್ಷನ್‌ ಮಾಡೋದು ಡೌಟ್‌ ಅಂತಿದ್ದಾರೆ.

Advertisement

ಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Advertisement
Tags :
Advertisement