For the best experience, open
https://m.newskannada.com
on your mobile browser.
Advertisement

ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್ ವಾಂಖೆಡೆ

ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖಡೆ, ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಭವಿಷ್ಯದಲ್ಲಿ ಸಹ ತಮ್ಮ ಕುರಿತಾಗಿ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸಮೀರ್​ ವಾಂಖೆಡೆ ಹೂಡಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಅಲಿ ಖಾಸಿಫ್ ಖಾನ್, ಸಮೀರ್ ಈ ಪ್ರಕರಣದಲ್ಲಿ ಗೆದ್ದರೆ ಆತ ಹೇಳಿರುವುದಕ್ಕಿಂತಲೂ ಹೆಚ್ಚು ಹಣ ಕೊಡುವುದಾಗಿ ಸವಾಲು ಹಾಕಿದ್ದಾರೆ.
01:51 PM Mar 20, 2024 IST | Ashitha S
ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಮೀರ್ ವಾಂಖೆಡೆ

ಮುಂಬೈ: ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖಡೆ, ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಭವಿಷ್ಯದಲ್ಲಿ ಸಹ ತಮ್ಮ ಕುರಿತಾಗಿ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸಮೀರ್​ ವಾಂಖೆಡೆ ಹೂಡಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಅಲಿ ಖಾಸಿಫ್ ಖಾನ್, ಸಮೀರ್ ಈ ಪ್ರಕರಣದಲ್ಲಿ ಗೆದ್ದರೆ ಆತ ಹೇಳಿರುವುದಕ್ಕಿಂತಲೂ ಹೆಚ್ಚು ಹಣ ಕೊಡುವುದಾಗಿ ಸವಾಲು ಹಾಕಿದ್ದಾರೆ.

Advertisement

ಸಮೀರ್ ವಾಂಖೆಡೆ, ಎನ್​ಸಿಬಿ ಅಧಿಕಾರಿಯಾಗಿದ್ದಾಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಅದೇ ವೇಳೆ ಮುನ್​ಮುನ್ ಧಮೇಚ ಹಾಗೂ ಆರ್ಯನ್ ಖಾನ್ ಗೆಳೆಯನೊಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಮುನ್​ಮುನ್ ಧಮೇಚಾ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಅಲಿ ಖಾಸಿಫ್ ಖಾನ್ ಇತ್ತೀಚೆಗೆ ಮರಾಠಿ ಟಿವಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು.

ಸಂದರ್ಶನದ ವಿಡಿಯೋಗಳನ್ನು ನಟಿ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವು ದಾಖಲೆಗಳನ್ನು ಸಹ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಈಗ ಸಮೀರ್ ವಾಂಖೆಡೆ, ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ಮೇಲೆ 11 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Advertisement

Advertisement
Tags :
Advertisement