ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೋಟೇಶ್ವರ ಕಡಲ ತೀರದಲ್ಲಿ ಗಮನ ಸೆಳೆದ 'ಕಾರ್ಟೂನ್ ಹಬ್ಬ'ಕ್ಕೆ ಶುಭಕೋರುವ ಮರಳು ಶಿಲ್ಪ

ಕುಂದಾಪುರದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಕುಂದೇಶ್ವರ ದೀಪೋತ್ಸವದ ಅಂಗವಾಗಿ 10ನೇ ವರ್ಷದ ಕಾರ್ಟೂನ್ ಹಬ್ಬಕ್ಕೆ ಶುಭಕೋರುವ ಮರಳು ಶಿಲ್ಪವನ್ನು ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ರಚಿಸಲಾಯಿತು.
03:17 PM Dec 08, 2023 IST | Gayathri SG

ಉಡುಪಿ: ಕುಂದಾಪುರದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಕುಂದೇಶ್ವರ ದೀಪೋತ್ಸವದ ಅಂಗವಾಗಿ 10ನೇ ವರ್ಷದ ಕಾರ್ಟೂನ್ ಹಬ್ಬಕ್ಕೆ ಶುಭಕೋರುವ ಮರಳು ಶಿಲ್ಪವನ್ನು ಕೋಟೇಶ್ವರದ ಹಳೆ ಅಳಿವೆ ಕಡಲ ತೀರದಲ್ಲಿ ರಚಿಸಲಾಯಿತು.

Advertisement

ಕುಂದೇಶ್ವರ ದೇವರನ್ನು ಕೇಂದ್ರವಾಗಿಸಿ 4 ಅಡಿ ಮತ್ತು 7.5 ಅಡಿ ಎತ್ತರ ಹಾಗೂ ಅಗಲದ ಮರಳು ಕಲಾಕೃತಿಯನ್ನು ಉಡುಪಿ ಸ್ಯಾಂಡ್ ಥೀಮ್ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದರು.

ಈ ಸಂದರ್ಭದಲ್ಲಿ 'ಕಾರ್ಟೂನ್ ಹಬ್ಬ'ದ ನೇತಾರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಮತ್ತು ಬಳಗದವರು ಉಪಸ್ಥಿತರಿದ್ದರು.

Advertisement

Advertisement
Tags :
LatestNewsNewsKannadaಉಡುಪಿಕುಂದಾಪುರ
Advertisement
Next Article