For the best experience, open
https://m.newskannada.com
on your mobile browser.
Advertisement

‘ವಿಜಯೀಭವ ಸಂಗೀತಾ ಶೃಂಗೇರಿ’ ಟ್ರೆಂಡ್​​ನಲ್ಲಿ ಬಿಗ್‌ ಬಾಸ್‌ ಬೆಡಗಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಫಿನಾಲೆ ಟಿಕೆಟ್ ಪಡೆದಿರೋ ಸಂಗೀತಾ ಶೃಂಗೇರಿ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಂಗೀತಾ ಶೃಂಗೇರಿ ಅವರು ಬಿಗ್‌ ಬಾಸ್‌ ಮನೆಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಅವರಿಂದ ದೂರ ಆದರು. ನಂತರ ವಿನಯ್ ಜೊತೆ ಸೇರಿ ಟ್ರೋಲ್ ಆದರು. ಎಲ್ಲಕ್ಕಿಂತ ಮುಖ್ಯವಾಗಿ ಟಾಸ್ಕ್ ಆಡುವಾಗ ಅವರ ಕಣ್ಣಿಗೆ ಹಾನಿ ಉಂಟಾಯಿತು. ಇದರಿಂದ ಅವರು ಹಿಂಜರಿಯಲಿಲ್ಲ. ಈಗ ಅವರ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.
09:41 AM Jan 22, 2024 IST | Ashitha S
‘ವಿಜಯೀಭವ ಸಂಗೀತಾ ಶೃಂಗೇರಿ’ ಟ್ರೆಂಡ್​​ನಲ್ಲಿ ಬಿಗ್‌ ಬಾಸ್‌ ಬೆಡಗಿ

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಫಿನಾಲೆ ಟಿಕೆಟ್ ಪಡೆದಿರೋ ಸಂಗೀತಾ ಶೃಂಗೇರಿ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಂಗೀತಾ ಶೃಂಗೇರಿ ಅವರು ಬಿಗ್‌ ಬಾಸ್‌ ಮನೆಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆರಂಭದಲ್ಲಿ ಕಾರ್ತಿಕ್ ಅವರಿಂದ ದೂರ ಆದರು. ನಂತರ ವಿನಯ್ ಜೊತೆ ಸೇರಿ ಟ್ರೋಲ್ ಆದರು. ಎಲ್ಲಕ್ಕಿಂತ ಮುಖ್ಯವಾಗಿ ಟಾಸ್ಕ್ ಆಡುವಾಗ ಅವರ ಕಣ್ಣಿಗೆ ಹಾನಿ ಉಂಟಾಯಿತು. ಇದರಿಂದ ಅವರು ಹಿಂಜರಿಯಲಿಲ್ಲ. ಈಗ ಅವರ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

Advertisement

ಸಂಗಿತಾ ಫಿನಾಲೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಸಂಗೀತಾ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಫ್ಯಾನ್ಸ್​ನಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಡೀ ಜರ್ನಿಯನ್ನು ಗಮನಿಸಿ ಸುದೀಪ್ ಅವರು ಸಂಗೀತಾ ಹಾಗೂ ವಿನಯ್​ಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ‘ನೀವಿಬ್ಬರು ಇಲ್ಲದೆ ಇದ್ದರೆ ಬಿಗ್ ಬಾಸ್​ನ ಈ ಜರ್ನಿ ಅಪೂರ್ಣ ಆಗುತ್ತಿತ್ತು’ ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊರಗಿನಿಂದ ಸಂಗೀತಾ ಅವರನ್ನು ಬೆಂಬಲಿಸೋ ಕಾರ್ಯ ನಡೆಯುತ್ತಿದೆ. ಎಲ್ಲರೂ ಸಂಗೀತಾ ಪರ ಟ್ವಿಟರ್​ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ‘VIJAYIBHAVA SANGEETHA SRINGERI’ ಎಂದು ಟ್ವೀಟ್ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 2 ಲಕ್ಷ ಟ್ವೀಟ್ ಆಗಿದೆ. ಇನ್ನು ಟಾಸ್ಕ್​ ವಿಚಾರ ಬಂದಾಗ ಅನೇಕ ಟಾಸ್ಕ್​ಗಳನ್ನು ಸಂಗೀತ ಅವರು ಗೆದ್ದಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ.

Advertisement

Advertisement
Tags :
Advertisement