ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಂಬಾನಿಗೆ ದಂಡ ವಿಧಿಸಿದ ಸೆಬಿ ಕ್ರಮ ರದ್ದುಗೊಳಿಸಿದ ಎಸ್​ಎಟಿ

ಹದಿನಾರು ವರ್ಷದ ಹಿಂದಿನ ಪ್ರಕರಣವೊಂದರ ಸಂಬಂಧ ಮುಕೇಶ್ ಅಂಬಾನಿ ಹಾಗೂ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ದಂಡ ವಿಧಿಸಿದ್ದ ಸೆಬಿ ಆದೇಶವನ್ನು ಕೋರ್ಟ್ ರದ್ದು ಮಾಡಿದೆ.
01:55 PM Dec 06, 2023 IST | Ashitha S

ನವದೆಹಲಿ: ಹದಿನಾರು ವರ್ಷದ ಹಿಂದಿನ ಪ್ರಕರಣವೊಂದರ ಸಂಬಂಧ ಮುಕೇಶ್ ಅಂಬಾನಿ ಹಾಗೂ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ದಂಡ ವಿಧಿಸಿದ್ದ ಸೆಬಿ ಆದೇಶವನ್ನು ಕೋರ್ಟ್ ರದ್ದು ಮಾಡಿದೆ.

Advertisement

2007ರ ಆರ್​ಪಿಎಲ್ (ರಿಲಾಯನ್ಸ್ ಪೆಟ್ರೋಲಿಯಂ) ಪ್ರಕರಣದಲ್ಲಿ ಅಂಬಾನಿ ಮತ್ತು ಇತರ ಎರಡು ಸಂಸ್ಥೆಗಳ ಮೇಲೆ ಸೆಬಿ 2021ರಲ್ಲಿ ಒಟ್ಟು 70 ಕೋಟಿ ರೂ ದಂಡ ಹಾಕಿತ್ತು. ಷೇರು ಮೇಲ್ಮನವಿ ನ್ಯಾಯಮಂಡಳಿ ಈ ಆದೇಶವನ್ನು ರದ್ದುಪಡಿಸಿದೆ. ಆಗ ಅಸ್ತಿತ್ವದಲ್ಲಿದ್ದ ರಿಲಾಯನ್ಸ್ ಪೆಟ್ರೋಲಿಯಂ ಲಿ ಸಂಸ್ಥೆಯ ಷೇರುಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಪ್ರಕರಣ ಅದಾಗಿತ್ತು.

ಈ ಪ್ರಕರಣದಲ್ಲಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಅಷ್ಟೇ ಅಲ್ಲದೇ ನವಿ ಮುಂಬೈ ಎಸ್​ಇಝಡ್ ಹಾಗೂ ಮುಂಬೈ ಎಸ್​ಇಝಡ್ ಕಂಪನಿಗಳ ಮೇಲೂ ಸೆಬಿ ದಂಡ ವಿಧಿಸಿತ್ತು. ರಿಲಾಯನ್ಸ್ ಇಂಡಸ್ಟ್ರೀಸ್ ಮೇಲೆ 25 ಕೋಟಿ ರೂ ದಂಡ ಹಾಕಲಾಗಿದ್ದರೆ, ಅದರ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಮುಕೇಶ್ ಅಂಬಾನಿಗೆ 15 ಕೋಟಿ ರೂ ಫೈನ್ ವಿಧಿಸಲಾಗಿತ್ತು.

Advertisement

ಇನ್ನು, ನವಿ ಮುಂಬೈ ಎಸ್​ಇಝಡ್ ಹಾಗೂ ಮುಂಬೈ ಎಸ್​ಇಝಡ್ ಸಂಸ್ಥೆಗಳ ಮೇಲೆ ಕ್ರಮವಾಗಿ 20 ಕೋಟಿ ರೂ ಹಾಗೂ 10 ಕೋಟಿ ರೂ ದಂಡ ಹಾಕಿ ಸೆಬಿ ಆದೇಶ ಹೊರಡಿಸಿತ್ತು. ಈ ಮೂರು ಸಂಸ್ಥೆಗಳು ಸೆಬಿ ಆದೇಶದ ವಿರುದ್ಧ ಎಸ್​ಎಟಿ ಬಳಿ ಮೇಲ್ಮನವಿ ಹೋಗಿದ್ದವು. ಈಗ ಈ ಮೂರು ಸಂಸ್ಥೆಗಳ ಪರವಾಗಿ ನ್ಯಾಯಮಂಡಳಿ ತೀರ್ಪು ನೀಡಿದೆ.

 

 

Advertisement
Tags :
GOVERNMENTindiaLatestNewsNewsKannadaಅಂಬಾನಿಎಸ್​ಎಟಿನವದೆಹಲಿಬೆಂಗಳೂರು
Advertisement
Next Article