ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಧವೆಗೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ಸುಪ್ರೀಂ !

26ರ ಹರೆಯದ ವಿಧವೆಯೊಬ್ಬರಿಗೆ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಇದು ಸಾಮಾನ್ಯ ಭ್ರೂಣ ಮತ್ತು ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮಂಡಳಿಯು ಹೇಳಿದೆ. ಈ ಅಭಿಪ್ರಾಯ ಪರಿಗಣಿಸಿದ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದೆ.
10:23 AM Feb 01, 2024 IST | Ashitha S

ವದೆಹಲಿ: 26ರ ಹರೆಯದ ವಿಧವೆಯೊಬ್ಬರಿಗೆ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ(ಜ.31) ನಿರಾಕರಿಸಿದೆ. ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ. ಇದು ಸಾಮಾನ್ಯ ಭ್ರೂಣ ಮತ್ತು ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮಂಡಳಿಯು ಹೇಳಿದೆ. ಈ ಅಭಿಪ್ರಾಯ ಪರಿಗಣಿಸಿದ ಸುಪ್ರೀಂ  ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದೆ.

Advertisement

ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ ಅವರನ್ನೊಳಗೊಂಡ ಪೀಠವು ತನ್ನ 29 ವಾರಗಳ ಭ್ರೂಣವನ್ನು ಅಂತ್ಯಗೊಳಿಸಲು ಜನವರಿ 4 ರ ಆದೇಶವನ್ನು ಹಿಂಪಡೆಯಲು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಧವೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಇದು 32 ವಾರಗಳ ಭ್ರೂಣ. ಅದನ್ನು ಹೇಗೆ ಕೊನೆಗೊಳಿಸಬಹುದು? ವೈದ್ಯಕೀಯ ಮಂಡಳಿ ಕೂಡ ಇದನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು ಎರಡು ವಾರಗಳ ವಿಷಯವಾಗಿದೆ, ನೀವು ಬಯಸಿದರೆ ಅದನ್ನು ದತ್ತು ಪಡೆಯಲು ನೀಡಬಹುದು ಎಂದು ಪೀಠ ಹೇಳಿದೆ.

Advertisement

Advertisement
Tags :
GOVERNMENTindiaLatestNewsNewsKannadaಗರ್ಭಪಾತನವದೆಹಲಿಬೆಂಗಳೂರು
Advertisement
Next Article