For the best experience, open
https://m.newskannada.com
on your mobile browser.
Advertisement

ಮಗನಿಗಾಗಿ ಶರ್ಟ್​ಲೆಸ್ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟ ಶಾರುಖ್ ಖಾನ್ 

ನಟ ಶಾರುಖ್ ಖಾನ್  ಸಿನಿಮಾದ ಜೊತೆಗೆ ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದೀಗ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ.
07:26 AM Feb 26, 2024 IST | Ashika S
ಮಗನಿಗಾಗಿ ಶರ್ಟ್​ಲೆಸ್ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟ ಶಾರುಖ್ ಖಾನ್ 

ಮುಂಬೈ: ನಟ ಶಾರುಖ್ ಖಾನ್  ಸಿನಿಮಾದ ಜೊತೆಗೆ ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದೀಗ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ.

Advertisement

ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿರೋ ಆರ್ಯನ್ ಖಾನ್, ಇದರ ಪ್ರಚಾರಕ್ಕೆ ತಂದೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಬ್ರ್ಯಾಂಡ್ ಪ್ರಚಾರಕ್ಕೆ ಯಾವುದೇ ಹಣ ಪಡೆಯದ ಶಾರುಖ್ ಖಾನ್,  ಈಗ ಅವರು ಮಗನಿಗಾಗಿ ಶರ್ಟ್​ಲೆಸ್ ಅವತಾರ ತಾಳಿದ್ದಾರೆ. ಈ ಫೋಟೋ ವೈರಲ್ ಆಗಿದೆ.

Advertisement

ಶಾರುಖ್ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಶರ್ಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅವರು ತಮ್ಮ ಮಗನ ಬಟ್ಟೆ ಬ್ರ್ಯಾಂಡ್​ನ ಟ್ಯಾಗ್ ಮಾಡಿದ್ದಾರೆ. ಈ ಫೋಟೋ 20 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ತಂದೆಯ ಬೆಂಬಲ ನೋಡಿ ಆರ್ಯನ್ ಖುಷಿಪಟ್ಟಿದ್ದಾರೆ.

ಆರ್ಯನ್ ಖಾನ್ ಬಟ್ಟೆ ಬ್ರ್ಯಾಂಡ್ ಸಖತ್ ದುಬಾರಿ. ಈ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ‘Ask SRK’ ವೇಳೆ ಶಾರುಖ್ ಖಾನ್ ಅವರಿಗೂ ಈ ಬಗ್ಗೆ ದೂರು ನೀಡಲಾಗಿತ್ತು. ‘ಆರ್ಯನ್​ ನನಗೂ ಡಿಸ್ಕೌಂಟ್ ನೀಡುವುದಿಲ್ಲ’ ಎಂದು ಹೇಳುವ ಮೂಲಕ ಶಾರುಖ್ ಖಾನ್ ಎಲ್ಲರ ಬಾಯಿ ಮುಚ್ಚಿಸಿದ್ದರು.

ಒಂದು ಜಾಕೆಟ್​ಗೆ ಲಕ್ಷಾಂತರ ರೂಪಾಯಿ ಪಾವತಿಸಬೇಕಿದೆ.

Advertisement
Tags :
Advertisement