ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗೂಗಲ್​ ಹುಡುಕಾಟದಲ್ಲಿ ನಂಬರ್​ ಒನ್​ ಸ್ಥಾನ ಪಡೆದುಕೊಂಡ ಶಾರುಖ್​ ಖಾನ್

ನಟ ಶಾರುಖ್​ ಖಾನ್​ ಅಭಿನಯದ ‘ಜವಾನ್​’, ‘ಪಠಾಣ್​’ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲದೇ ಗೂಗಲ್​ ಹುಡುಕಾಟದಲ್ಲೂ  ಶಾರುಖ್​ ಖಾನ್​ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದ್ದಾರೆ.
08:45 AM Dec 12, 2023 IST | Ashika S

ಮುಂಬೈ : ನಟ ಶಾರುಖ್​ ಖಾನ್​ ಅಭಿನಯದ ‘ಜವಾನ್​’, ‘ಪಠಾಣ್​’ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿವೆ. ಗಲ್ಲಾಪೆಟ್ಟಿಗೆ ಗಳಿಕೆ ಮಾತ್ರವಲ್ಲದೇ ಗೂಗಲ್​ ಹುಡುಕಾಟದಲ್ಲೂ  ಶಾರುಖ್​ ಖಾನ್​ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದ್ದಾರೆ.

Advertisement

2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳ ಪಟ್ಟಿಯನ್ನು ಗೂಗಲ್​ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್​ ಖಾನ್​ ನಟನೆಯ ಜವಾನ್​ ಸಿನಿಮಾಗೆ ನಂಬರ್​ 1 ಸ್ಥಾನ ಸಿಕ್ಕಿದೆ.

2023ರಲ್ಲಿ ಸೂಪರ್​ ಹಿಟ್​ ಆದ ಮತ್ತೊಂದು ಸಿನಿಮಾ ‘ಗದರ್​ 2’ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರಿ ಚರ್ಚೆ ಹುಟ್ಟುಹಾಕಿದ್ದ ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಸಿನಿಮಾಗೆ 3ನೇ ಸ್ಥಾನ ಸಿಕ್ಕಿದೆ. 4ನೇ ಸ್ಥಾನದಲ್ಲಿ ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾ ಇದೆ. 5ನೇ ಸ್ಥಾನದಲ್ಲಿ ‘ಪಠಾಣ್​’, 6ನೇ ಸ್ಥಾನದಲ್ಲಿ ‘ದಿ ಕೇರಳ ಸ್ಟೋರಿ’, 7ನೇ ಸ್ಥಾನದಲ್ಲಿ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಇದೆ.

Advertisement

8ನೇ ಸ್ಥಾನದಲ್ಲಿ ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾ ಇದೆ. ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಸಿನಿಮಾ 9ನೇ ಸ್ಥಾನದಲ್ಲಿದೆ. 10ನೇ ಸ್ಥಾನದಲ್ಲಿ ‘ವಾರಿಸು’ ಸಿನಿಮಾ ಇದೆ.

ಈ ‘ಟಾಪ್​ 10’ ಪಟ್ಟಿಯಲ್ಲಿ ಕನ್ನಡದ ಯಾವುದೇ ಸಿನಿಮಾಗಳೂ ಕೂಡ ಸ್ಥಾನ ಪಡೆದುಕೊಂಡಿಲ್ಲ ಎಂಬುದು ಬೇಸರದ ಸಂಗತಿ.

Advertisement
Tags :
LatetsNewsNewsKannadaಗೂಗಲ್ಜವಾನ್ಪಠಾಣ್ಬಾಕ್ಸ್ ಆಫೀಸ್ಶಾರುಖ್​ ಖಾನ್ಸಿನಿಮಾ
Advertisement
Next Article