ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಿದ್ದಾರ್ಥ್- ಕಿಯಾರಾ

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಂದು (ಫೆಬ್ರವರಿ 7) ಮೊದಲ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿರುವ ಸೂರ್ಯಗಢ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು.
09:40 AM Feb 07, 2024 IST | Gayathri SG

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಂದು (ಫೆಬ್ರವರಿ 7) ಮೊದಲ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿರುವ ಸೂರ್ಯಗಢ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು.

Advertisement

ಸದ್ಯ ದಂಪತಿಗೆ ಅಭಿಮಾನಿಗಳು ಹಾಗೂ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇವರು ನೂರುಕಾಲ ಸುಖವಾಗಿ ಬಾಳಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. ಈ ಜೋಡಿ ಮೊದಲ ಬಾರಿಗೆ ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಈ ಸಿನಿಮಾ ರಿಲೀಸ್ ಆಗಿದ್ದು ಒಟಿಟಿಯಲ್ಲಿ. ಈ ಚಿತ್ರದ ಸೆಟ್​ನಲ್ಲಿ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಸಿದ್ದಾರ್ಥ್ ಪ್ರಪೋಸ್ ಮಾಡಿದಾಗ ಕಿಯಾರಾಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿರಲಿಲ್ಲ. ಆ ಬಳಿಕ ಅವರು ಪ್ರೀತಿಯನ್ನು ಒಪ್ಪಿಕೊಂಡರು. ‘ಕುಟುಂಬದವರನ್ನು ನೀನೇ ಒಪ್ಪಿಸಬೇಕು’ ಎಂದು ಸಿದ್ದಾರ್ಥ್​ಗೆ ಕಿಯಾರಾ ಹೇಳಿದ್ದರು. ಅಂತೆಯೇ ನಡೆದುಕೊಂಡರು ಸಿದ್ದಾರ್ಥ್. ಕುಟುಂಬದವರನ್ನು ಒಪ್ಪಿಸಿ ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆ ಆದರು.

Advertisement

Advertisement
Tags :
LatestNewsNewsKannadaಕಿಯಾರಾ ಅಡ್ವಾಣಿಸಿದ್ದಾರ್ಥ್ ಮಲ್ಹೋತ್ರಾ
Advertisement
Next Article