ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಡಿ. 20, 21, 22ರಂದು ಶಂಕರಪುರ ವಿಶ್ವಾಸದಮನೆ ಪುನರ್ವಸತಿ ಕೇಂದ್ರದ ರಜತ ಮಹೋತ್ಸವ

ಶಂಕರಪುರ ವಿಶ್ವಾಸದಮನೆ ಪುನರ್ವಸತಿ ಕೇಂದ್ರ ಹಾಗೂ ಡಿ.ಜಿ.ಎಂ.ಬೇತೆಲ್ ಚರ್ಚ್ ಯೇಸುಪುರ ಇದರ ರಜತ ಮಹೋತ್ಸವ ಸಮಾರಂಭ ಇದೇ ಬರುವ ಡಿಸೆಂಬರ್ 20, 21ಮತ್ತು 22ರಂದು ಮೂರು ದಿನಗಳ ಕಾಲ ಶಂಕರಪುರದ ಕ್ಯಾನರಿ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ವಿಶ್ವಾಸದಮನೆಯ ಸ್ಥಾಪಕ ಹಾಗೂ ಅಧ್ಯಕ್ಷ ಸುನೀಲ್ ಜಾನ್ ಡಿಸೋಜ ಹೇಳಿದರು.
01:46 PM Dec 15, 2023 IST | Ashika S

ಉಡುಪಿ: ಶಂಕರಪುರ ವಿಶ್ವಾಸದಮನೆ ಪುನರ್ವಸತಿ ಕೇಂದ್ರ ಹಾಗೂ ಡಿ.ಜಿ.ಎಂ.ಬೇತೆಲ್ ಚರ್ಚ್ ಯೇಸುಪುರ ಇದರ ರಜತ ಮಹೋತ್ಸವ ಸಮಾರಂಭ ಇದೇ ಬರುವ ಡಿಸೆಂಬರ್ 20, 21ಮತ್ತು 22ರಂದು ಮೂರು ದಿನಗಳ ಕಾಲ ಶಂಕರಪುರದ ಕ್ಯಾನರಿ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ವಿಶ್ವಾಸದಮನೆಯ ಸ್ಥಾಪಕ ಹಾಗೂ ಅಧ್ಯಕ್ಷ ಸುನೀಲ್ ಜಾನ್ ಡಿಸೋಜ ಹೇಳಿದರು.

Advertisement

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾಸದಮನೆ ಕಳೆದ 25 ವರ್ಷಗಳಿಂದ ಸಾರ್ಥಕ ಸೇವೆಯನ್ನು ಮಾಡಿಕೊಂಡು ಬಂದಿದೆ. ಅನಾಥರು, ನಿರ್ಗತಿಕರು, ಮಾನಸಿಕ ಅಸ್ವಸ್ಥರಿಗೆ ಉಚಿತ ವಸತಿ, ಊಟ, ಬಟ್ಟೆಬರೆ ಹಾಗೂ ವೈದ್ಯಕೀಯ ಶುಶ್ರೂಷೆಗಳನ್ನು ನೀಡುತ್ತಿದೆ ಎಂದರು.

ಡಿ. 20 ರಂದು ಸಂಜೆ 4ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಎ.ಸುವರ್ಣ, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ರೋಶನ್ ಬೆಳ್ಮಣ್, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ಈಶ್ವರ್ ಮಲ್ಪೆ, ರವಿ ಕಟಪಾಡಿ, ಆಸಿಫ್ ಆಪತ್ಭಾಂದವ, ಸೂರಿ ಶೆಟ್ಟಿ ಕಾಪು, ವಿನಯ್ ಸಾಸ್ತಾನ, ತನುಲಾ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

Advertisement
Tags :
LatestNewsNewsKannadaಕ್ಯಾನರಿ ಗಾರ್ಡನ್ಪುನರ್ವಸತಿ ಕೇಂದ್ರರಜತ ಮಹೋತ್ಸವವಿಶ್ವಾಸದಮನೆಸಮಾರಂಭ
Advertisement
Next Article