ಲೀಕ್ ಆಯ್ತು ‘ಪುಷ್ಪ 2’ ಚಿತ್ರದ ಶ್ರೀವಲ್ಲಿ ಲುಕ್
‘ಪುಷ್ಪ’ ಚಿತ್ರ ಬ್ಲಾಕ್ ಬಸ್ಟರ್ ಆಗಿದ್ದರಿಂದ ಬಹುನಿರೀಕ್ಷಿತ ‘ಪುಷ್ಪ 2’ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಮನೆ ಮಾಡಿದೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಪುಷ್ಪ 2’ ಸಿನಿಮಾದ ಶೂಟಿಂಗ್ ಸೆಟ್ನಿಂದ ಒಂದು ವಿಡಿಯೋ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ಶ್ರೀವಲ್ಲಿಯದು. ಹೌದು ಶ್ರೀವಲ್ಲಿ ಪಾತ್ರದ ಲುಕ್ ಬಹಿರಂಗ ಆಗಿದೆ. ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಪೇಜ್ಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಕಾಂಜೀವರಂ ಸೀರೆ ಧರಿಸಿ ಮಿಂಚಿದ್ದಾರೆ. ಮಧುಮಗಳ ರೀತಿಯಲ್ಲಿ ಮೈತುಂಬ ಆಭರಣ ಧರಿಸಿ ಅವರು ನಡೆದುಬರುತ್ತಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಪುಷ್ಪರಾಜ್ನ ಹೆಂಡತಿ ಶ್ರೀವಲ್ಲಿ ಪಾತ್ರ ‘ಪುಷ್ಪ 2’ ಚಿತ್ರದಲ್ಲೂ ಮುಂದುವರಿಯಲಿದೆ. ಆ ಪಾತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ.
Wooohoooooo
Here is Srivalli's 1st lookNow the excitement to watch this film has increased further.
Teri Jhalak Asharfi @iamRashmika 🔥❤️#RashmikaMandanna ❤️pic.twitter.com/EsZEfMcXkS
— Rashmika Delhi Fans (@Rashmikadelhifc) March 19, 2024