For the best experience, open
https://m.newskannada.com
on your mobile browser.
Advertisement

ಇಂದು ಸ್ಟಾರ್ ಸುವರ್ಣದಲ್ಲಿ 'ಒಂದು ಸರಳ ಪ್ರೇಮ ಕಥೆ’ ಪ್ರಸಾರ

ಫೆಬ್ರವರಿ 8ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಒಂದು ಸರಳ ಪ್ರೇಮ ಕಥೆ’ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಕಿತ್ತು. ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ 'ಒಂದು ಸರಳ ಪ್ರೇಮ ಕಥೆ’ ಚಿತ್ರವೂ ಏಪ್ರಿಲ್​ 14ರ ಇಂದು ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
07:10 AM Apr 14, 2024 IST | Ashitha S
ಇಂದು ಸ್ಟಾರ್ ಸುವರ್ಣದಲ್ಲಿ  ಒಂದು ಸರಳ ಪ್ರೇಮ ಕಥೆ’ ಪ್ರಸಾರ

ಫೆಬ್ರವರಿ 8ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ 'ಒಂದು ಸರಳ ಪ್ರೇಮ ಕಥೆ’ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಕಿತ್ತು. ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ 'ಒಂದು ಸರಳ ಪ್ರೇಮ ಕಥೆ’ ಚಿತ್ರವೂ ಏಪ್ರಿಲ್​ 14ರ ಇಂದು ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Advertisement

‘ಒಂದು ಸರಳ ಪ್ರೇಮ ಕಥೆ’ ಈ ವರ್ಷದ ಮೊದಲು ಬಿಡುಗಡೆಗೊಂಡ ಚಿತ್ರ. ಆ ಮೂಲಕ ವಿನಯ್​ ರಾಜ್​ಕುಮಾರ್​ ಅವರನ್ನು ಕೆಲ ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಅವರ ನಟನೆ ಕಾಣುವಂತಾಗಿತ್ತು. ನಿರ್ದೇಶಕ ಸಿಂಪಲ್ ಸುನಿ ಅವರು ಒಂದು ರೊಮ್ಯಾಂಟಿಕ್ ಕಾಮಿಡಿ, ಭಾವುಕತೆ, ಮಧುರ ಹಾಡುಗಳು, ಪಂಚಿಂಗ್​ ಡೈಲಾಗಗಳಿಂದಲೇ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಇದೇ ಅಂಶಗಳನ್ನು ಜನರ ಮುಂದಿಟ್ಟು ಗೆದ್ದಿರುವ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ.

ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ವಿನಯ್ ರಾಜ್‌ಕುಮಾರ್ ಅವರಿಗೆ ಜೊತೆಯಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Advertisement
Tags :
Advertisement