ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದೆ ರಾಮನ ಮೂರ್ತಿ

ಅಯೋಧ್ಯೆಯಲ್ಲಿ  ರಾಮಲಲ್ಲಾನ  ಪ್ರಾಣಪ್ರತಿಷ್ಠೆಗೆ ಸಕಲ ಸಿದ್ಧತೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬೃಹತ್ ರಾಮನ ಮೂರ್ತಿ ಜನರನ್ನ ಆಕರ್ಷಿಸುತ್ತಿದೆ.
11:03 AM Jan 20, 2024 IST | Ashika S

ಬೆಂಗಳೂರು: ಅಯೋಧ್ಯೆಯಲ್ಲಿ  ರಾಮಲಲ್ಲಾನ  ಪ್ರಾಣಪ್ರತಿಷ್ಠೆಗೆ ಸಕಲ ಸಿದ್ಧತೆ ನಡೆಯುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಬೃಹತ್ ರಾಮನ ಮೂರ್ತಿ ಜನರನ್ನ ಆಕರ್ಷಿಸುತ್ತಿದೆ.

Advertisement

ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ 15 ಅಡಿಯ ಬೃಹತ್ ರಾಮನ ಫೈಬರ್ ಮೂರ್ತಿ ತಲೆ ಎತ್ತಿದೆ. ಬೃಹತ್ ರಾಮನ ವಿಗ್ರಹ ನೋಡಿದ ಜನ ಭಕ್ತಿಯಿಂದ ರಾಮನಿಗೆ ವಂದಿಸಿ, ಪೋಟೋ ತೆಗೆದುಕೊಂಡು ಹೋಗುತ್ತಿದ್ದಾರೆ.

ನೀಲಾಕಾರನಾಗಿ ಕಲಾವಿದರ ಕೈಯಲ್ಲಿ ಮೂಡಿರುವ ರಾಮನ ಮೂರ್ತಿ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿರುವ ಆಂಜನೇಯ ದೇವಾಲಯದ ಹೊರಗೆ ಬರುವ ಜನರಿಗೆ ದರ್ಶನ ನೀಡುತ್ತಿದ್ದಾನೆ.  ನಗರದ ಕೇಂದ್ರಭಾಗದಲ್ಲಿ ನೆಲೆಸಿರುವ ಈ ರಾಮನ ವಿಗ್ರಹ ಜನವರಿ 23 ರವರೆಗೆ ಇರಲಿದ್ದು, ಬರುವ ಭಕ್ತರು ದರ್ಶನ ಪಡೆಯಬಹುದಾಗಿದೆ.

Advertisement

ಇನ್ನು ಬೆಂಗಳೂರಿನ ನಾನಾ ಭಾಗಗಳಲ್ಲೂ ಇಂತಹದ್ದೇ ಮೂರ್ತಿ ಪ್ರತಿಷ್ಠಾಪಿಸಲು ತಯಾರಿ ಕೂಡ ನಡೆದಿದೆ.

Advertisement
Tags :
LatetsNewsNewsKannadaಅಯೋಧ್ಯೆಪ್ರಾಣಪ್ರತಿಷ್ಠೆಮೂರ್ತಿರಾಮನ ಮೂರ್ತಿರಾಮಲಲ್ಲಾ
Advertisement
Next Article