ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಯೆನೆಪೋಯದಿಂದ ಬೀದಿನಾಟಕ

ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ 6 ನೇ ರಾಷ್ಟೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ನಾಟೆಕಲ್ ಬಸ್ಟ್ಯಾಂಡ್ ಬಳಿ ನ.18ರಂದು ಬೀದಿನಾಟಕ ಆಯೋಜಿಸಲಾಯಿತು.
06:25 PM Nov 23, 2023 IST | Ashika S

ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ 6 ನೇ ರಾಷ್ಟೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ನಾಟೆಕಲ್ ಬಸ್ಟ್ಯಾಂಡ್ ಬಳಿ ನ.18ರಂದು ಬೀದಿನಾಟಕ ಆಯೋಜಿಸಲಾಯಿತು.

Advertisement

ಜನರಿಗೆ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಪ್ರಕೃತಿಯಲ್ಲಿ ಸಿಗುವಂತಹ ಆಹಾರದ ಪ್ರಾಮುಖ್ಯತೆ ತಿಳಿಸಲಾಯಿತು. ದಿನನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ಮಾನಸಿಕ ಅರೋಗ್ಯ ವೃದ್ಧಿಗೆ ಸಹಾಯಕವಾಗುತ್ತದೆ ಎಂಬ ಮಾಹಿತಿ ಹಂಚಿಕೊಳ್ಳಲಾಯಿತು.

"ಪ್ರಕೃತಿಯೇ ಚಿಕಿತ್ಸಕ" ಎಂಬ ಮಾತಿನ ಸಾರಾಂಶದ ಮೂಲಕ ಜನರಿಗೆ ಈ ಬೀದಿನಾಟಕ ಪ್ರದರ್ಶಿಸಲಾಯಿತು. ಯೆನೆಪೋಯದ ಶಿಬಿರಾಧಿಕಾರಿ ರಜಾಕ್‌, ಮಂಜನಾಡಿ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಹಾಗೂ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವ್ಯದ್ಯಾಧಿಕಾರಿಗಳಾದ ಡಾ. ಶಗುಪ್ತ, ಡಾ. ಅರ್ಪಿತ್ ಕುಮಾರ್ ಮತ್ತು ಅಜಿತ್ ಉಪಸ್ಥಿತರಿದ್ದರು.

Advertisement

Advertisement
Tags :
LatetsNewsNewsKannadaಕಾಲೇಜುಪ್ರಕೃತಿ ಚಿಕಿತ್ಸೆಯೆನೆಪೋಯಯೋಗ ವಿಜ್ಞಾನ
Advertisement
Next Article