ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಣಿಪಾಲ: ಕಾಲೇಜು ವಿದ್ಯಾರ್ಥಿ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ: ವಿಡಿಯೋ ವೈರಲ್

ಪರೀಕ್ಷೆಯ ಸಂದರ್ಭ ಉಂಟಾದ ಘಟನೆಯಿಂದ ಮನನೊಂದ ಕಾಲೇಜು ವಿದ್ಯಾರ್ಥಿಯೋರ್ವ ಕ್ಲಾಸ್ ರೂಮ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.ಈ ಘಟನೆ ಎರಡು ದಿನಗಳ ಹಿಂದೆ ಮಣಿಪಾಲದ ಕಾಲೇಜಿನಲ್ಲಿ ಸಂಭವಿಸಿತ್ತು.
06:29 PM Feb 20, 2024 IST | Gayathri SG

ಮಣಿಪಾಲ: ಪರೀಕ್ಷೆಯ ಸಂದರ್ಭ ಉಂಟಾದ ಘಟನೆಯಿಂದ ಮನನೊಂದ ಕಾಲೇಜು ವಿದ್ಯಾರ್ಥಿಯೋರ್ವ ಕ್ಲಾಸ್ ರೂಮ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.ಈ ಘಟನೆ ಎರಡು ದಿನಗಳ ಹಿಂದೆ ಮಣಿಪಾಲದ ಕಾಲೇಜಿನಲ್ಲಿ ಸಂಭವಿಸಿತ್ತು.

Advertisement

ಮಾಣಿಪಾಲದ ಮಾಹೆಯ ಎಂಸಿಎಚ್‌ಪಿ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಬಿಹಾರ ಮೂಲದ ಸತ್ಯಂ ಸುಮನ್ (20) ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ. ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಸತ್ಯಂ ಸುಮನ್ ಮೊಬೈಲ್ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಶಿಕ್ಷಕರು ಆತನನ್ನು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ.

ಇದರಿಂದ ಮನನೊಂದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದಿಂದಲೇ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸದ್ಯ ಈ ದೃಶ್ಯ ವೈರಲ್ ಆಗುತ್ತಿದೆ.

Advertisement

Advertisement
Tags :
LatestNewsNewsKannadaUDUPIಮಣಿಪಾಲ
Advertisement
Next Article