ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕನಸು ನನಸಾಯಿತು: ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ ಸುಧಾ ಮೂರ್ತಿ

ಇನ್ಪೋಸಿಸ್​ ಸಂಸ್ಥಾಪಕಿ,ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರು ಇಂದು(ಶುಕ್ರವಾರ) ನವದೆಹಲಿಯ ಹೊಸ ಸಂಸತ್ ಕಟ್ಟಡಕ್ಕೆ ಭೇಟಿ ನೀಡಿದ್ದಾರೆ. ಇದು ತುಂಬಾ ಸುಂದರವಾಗಿದೆ. ವರ್ಣಿಸಲು ಪದಗಳಿಲ್ಲ. ನಾನು ಇದನ್ನು ಬಹಳ ದಿನಗಳಿಂದ ನೋಡಬೇಕೆಂದು ಬಯಸಿದ್ದೆ ಎಂದು ಹೇಳಿದ್ದಾರೆ.
02:40 PM Dec 08, 2023 IST | Ashitha S

ದೆಹಲಿ: ಇನ್ಪೋಸಿಸ್​ ಸಂಸ್ಥಾಪಕಿ,ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರು ಇಂದು(ಶುಕ್ರವಾರ) ನವದೆಹಲಿಯ ಹೊಸ ಸಂಸತ್ ಕಟ್ಟಡಕ್ಕೆ ಭೇಟಿ ನೀಡಿದ್ದಾರೆ.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ ಅವರು ಹೊಸ ಕಟ್ಟಡದ ಬಗ್ಗೆ ತಮ್ಮ ವಿಸ್ಮಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. "ಇದು ತುಂಬಾ ಸುಂದರವಾಗಿದೆ. ವರ್ಣಿಸಲು ಪದಗಳಿಲ್ಲ. ನಾನು ಇದನ್ನು ಬಹಳ ದಿನಗಳಿಂದ ನೋಡಬೇಕೆಂದು ಬಯಸಿದ್ದೆ. ಇದು ಇಂದು ಕನಸು ನನಸಾಯಿತು. ಹೊಸದಾಗಿ ನಿರ್ಮಿಸಲಾದ ಸಂಸತ್ ಕಟ್ಟಡ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಇದು ಸುಂದರವಾಗಿದೆ… ಇದು ಕಲೆ, ಸಂಸ್ಕೃತಿ, ಭಾರತೀಯ ಇತಿಹಾಸ – ಎಲ್ಲವೂ ಸುಂದರವಾಗಿದೆ” ಎಂದು ಹೇಳಿದ್ದಾರೆ.

ಕಟ್ಟಡವನ್ನು ನಿರ್ಮಿಸಿದ ಅವಧಿಯು ನಿಜವಾಗಿಯೂ ಗಮನಾರ್ಹವಾದುದು. ಇಷ್ಟು ಕಡಿಮೆ ಅವಧಿಯಲ್ಲಿ, ಅದನ್ನು ಸುಂದರವಾಗಿ ಜೋಡಿಸಲಾಗಿದೆ ಮತ್ತು ಕ್ಯುರೇಟ್ ಮಾಡಲಾಗಿದೆ .ಈ ಎಲ್ಲಾ ವಿಷಯಗಳನ್ನು ನೋಡಲು ನಾನು ಒಂದು ಅಥವಾ ಎರಡು ದಿನಗಳನ್ನು ಕಳೆಯಲು ಬಯಸುತ್ತೇನೆ ಎಂದಿದ್ದಾರೆ.

Advertisement

 

 

Advertisement
Tags :
GOVERNMENTindiaLatestNewsNewsKannadaನವದೆಹಲಿನೂತನ ಸಂಸತ್ಬೆಂಗಳೂರುಸುಧಾ ಮೂರ್ತಿ
Advertisement
Next Article