ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಠ ಬಿಟ್ಟು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು; ಮುಯಿಜುಗೆ ಮಾಜಿ ಅಧ್ಯಕ್ಷರಿಂದ ಪಾಠ

ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಹಠ ಬಿಟ್ಟು ನೆರೆಯ ದೇಶಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ಮೊಹಮ್ಮದ್‌ ಮುಯಿಜುಗೆ ಮಾಜಿ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೊಲಿಹ್‌ ಸಲಹೆ ನೀಡಿದ್ದಾರೆ.
07:19 PM Mar 25, 2024 IST | Maithri S

ಮಾಲೆ: ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಹಠ ಬಿಟ್ಟು ನೆರೆಯ ದೇಶಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ಮೊಹಮ್ಮದ್‌ ಮುಯಿಜುಗೆ ಮಾಜಿ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೊಲಿಹ್‌ ಸಲಹೆ ನೀಡಿದ್ದಾರೆ.

Advertisement

ಇತ್ತೀಚೆಗಷ್ಟೆ ಭಾರತ ತಮ್ಮ ಸಾಲ ಮನ್ನಾ ಮಾಡಬೇಕು ಎಂದು ಅಧ್ಯಕ್ಷ ಮುಯಿಜು ಕೇಳಿಕೊಂಡಿದ್ದರು.

ʼನೆರೆಹೊರೆಯವರು ನಮಗೆ ಸಹಾಯ ಮಾಡುತ್ತಾರೆಂದು ನಾನು ನಂಬಿದ್ದೇನೆ. ಇದಕ್ಕಾಗಿ ನಾವು ಹಠ ಬಿಟ್ಟು ಮಾತುಕತೆಗೆ ಮುಂದಾಗಬೇಕು. ಆದರೆ ಮುಯಿಜು ಇದಕ್ಕೆ ತಯಾರಿಲ್ಲʼ ಎಂದ ಸೊಲಿಹ್‌, ನಮ್ಮ ಸರ್ಕಾರಕ್ಕೆ ಈಗ ಪರಿಸ್ಥಿತಿ ಅರ್ಥವಾಗಲು ಶುರುವಾಗಿದೆ ಎಂದರು.

Advertisement

ಭಾರತವನ್ನು ಮಾಲ್ಡೀವ್ಸ್‌ನಿಂದ ಹೊರಹಾಕುವ ಭರವಸೆಯೊಂದಿಗೆ ಚುನಾವಣೆ ಎದುರಿಸಿದ್ದ ಚೀನಾ ಪರ ನಾಯಕ ಮುಯಿಜು ಇತ್ತೀಚೆಗೆ ಭಾರತೀಯ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸರ್ಕಾರಕ್ಕೆ ತಾಕೀತು ಮಾಡಿದ್ದರು.

Advertisement
Tags :
indiaLatestNewsMaldivesNewsKannada
Advertisement
Next Article