ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜಾಕ್ವೆಲಿನ್​ ಖಾಸಗಿ ವಿಡಿಯೋ ಲೀಕ್ ​ ಮಾಡುವುದಾಗಿ ಬೆದರಿಕೆ ಹಾಕಿದ ಸುಕೇಶ್

200 ಕೋಟಿ ರೂಪಾಯಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​  ಜಾಕ್ವೆಲಿನ್​ ಫರ್ನಾಂಡಿಸ್​ ನ ಖಾಸಗಿ ವಿಡಿಯೋವನ್ನು ಲೀಕ್ ​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
07:55 PM Jan 05, 2024 IST | Ashika S

ಬೆಂಗಳೂರು:  200 ಕೋಟಿ ರೂಪಾಯಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​  ಜಾಕ್ವೆಲಿನ್​ ಫರ್ನಾಂಡಿಸ್​ ನ ಖಾಸಗಿ ವಿಡಿಯೋವನ್ನು ಲೀಕ್ ​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

Advertisement

ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕ್ಲೋಸ್​ ಆಗಿದ್ದರು. ಆದರೆ ಅವರಿಬ್ಬರ ಸಂಬಂಧ ರಹಸ್ಯವಾಗಿ ಉಳಿದುಕೊಂಡಿತ್ತು. ಸುಕೇಶ್​ ಚಂದ್ರಶೇಖರ್​ ಬಂಧನದ ಬಳಿಕ ವಿಚಾರಣೆ ವೇಳೆ ಅನೇಕ ಸತ್ಯಗಳು ಹೊರಬಂದವು.

ಕೆಲವೇ ದಿನಗಳ ಹಿಂದೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕೋರ್ಟ್​ನಲ್ಲಿ ಒಂದು ಮನವಿ ಸಲ್ಲಿಸಿದ್ದರು. ಸುಕೇಶ್​​ಗೆ ಸಂಬಂಧಿಸಿದ ಕೇಸ್​ನಲ್ಲಿ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಅವರು ಕೋರಿದ್ದರು. ಈ ವಿಷಯ ಗೊತ್ತಾದ ಬಳಿಕ ಸುಕೇಶ್​ ಚಂದ್ರಶೇಖರ್​ಈಗ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದಾನೆ.

Advertisement

ತಮ್ಮ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ವಿನಿಮಯ ಆದ ವಾಟ್ಸಪ್​ ಸಂದೇಶಗಳನ್ನು ಆತ ಲೀಕ್​ ಮಾಡಿದ್ದಾನೆ. ಇದು ಬರೀ ಟೀಸರ್​ ಮಾತ್ರ. ನೂರಾರು ಚಾಟ್​ಗಳು, ಖಾಸಗಿ ವಿಡಿಯೋಗಳು, ವಾಯ್ಸ್​ ರೆಕಾರ್ಡಿಂಗ್ಸ್​ ಇವೆ. ಇದನ್ನು ತನಿಖಾಧಿಕಾರಿಗಳಿಗೆ ನೀಡದ ಹೊರತು ಬೇರೆ ಯಾವುದೇ ಆಯ್ಕೆ ತನ್ನ ಬಳಿ ಈಗ ಉಳಿದಿಲ್ಲ ಎಂದು ಸುಕೇಶ್​ ಚಂದ್ರಶೇಖರ್​ ಹೇಳಿರುವುದಾಗಿ ವರದಿ ಆಗಿದೆ.

Advertisement
Tags :
LatetsNewsNewsKannadaಕೇಸ್ಕೋಟಿಜಾಕ್ವೆಲಿನ್ ಫರ್ನಾಂಡಿಸ್ಲೀಕ್ ​ವಂಚನೆವಿಡಿಯೋಸುಕೇಶ್ ಚಂದ್ರಶೇಖರ್
Advertisement
Next Article