For the best experience, open
https://m.newskannada.com
on your mobile browser.
Advertisement

ಸನ್ನಿ ಮನೆ ಕೆಲಸದಾಕೆ ಪುತ್ರಿ ಮಿಸ್ಸಿಂಗ್‌: ಹೆಲ್ಪ್‌ ಕೇಳಿದ ಸನ್ನಿ ಹೇಳಿದ್ದೇನು

ನಟಿ ಸನ್ನಿ ಲಿಯೋನ್‌ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದಾಕೆಯ ಪುತ್ರಿ ಕಾಣೆಯಾಗಿರುವ ಬಗ್ಗೆ ಇನ್‌ ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮುಂಬೈನ ಜೋಗೇಶ್ವರಿ ಮನೆಯಿಂದ ಅನುಷ್ಕಾ ಮೋರ್‌(9) ಕಾಣೆಯಾಗಿರುವುದಾಗಿ ವಿವರ ಹಂಚಿಕೊಂಡಿದ್ದಾರೆ.
06:32 PM Nov 09, 2023 IST | Ashika S
ಸನ್ನಿ ಮನೆ ಕೆಲಸದಾಕೆ ಪುತ್ರಿ ಮಿಸ್ಸಿಂಗ್‌  ಹೆಲ್ಪ್‌ ಕೇಳಿದ ಸನ್ನಿ ಹೇಳಿದ್ದೇನು

ಮುಂಬೈ: ನಟಿ ಸನ್ನಿ ಲಿಯೋನ್‌ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದಾಕೆಯ ಪುತ್ರಿ ಕಾಣೆಯಾಗಿರುವ ಬಗ್ಗೆ ಇನ್‌ ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮುಂಬೈನ ಜೋಗೇಶ್ವರಿ ಮನೆಯಿಂದ ಅನುಷ್ಕಾ ಮೋರ್‌(9) ಕಾಣೆಯಾಗಿರುವುದಾಗಿ ವಿವರ ಹಂಚಿಕೊಂಡಿದ್ದಾರೆ.

Advertisement

ಅದೇ ರೀತಿ ಮುಂಬೈ ಪೊಲೀಸ್ ಮತ್ತು ಬಿಎಂಸಿಯ ಅಧಿಕೃತ ಖಾತೆಗಳನ್ನು ಟ್ಯಾಗ್ ಮಾಡಿರುವ ಸನ್ನಿ, ಜೋಗೇಶ್ವರಿ ಪಶ್ಚಿಮದ ಬೆಹ್ರಾಮ್ ಬಾಗ್‌ನಿಂದ ಗುರುವಾರ ಸಂಜೆಯಿಂದ ಅನುಷ್ಕಾ ನಾಪತ್ತೆಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅನುಷ್ಕಾಳನ್ನು ಸುರಕ್ಷಿತವಾಗಿ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ನೀಡುವುದಾಗಿ ಅವರು ಹೇಳಿದ್ದಾರೆ.

ಅಲ್ಲದೆ ಆಕೆಯ ತಾಯಿಯನ್ನು ಸಂಪರ್ಕಿಸುವಂತೆ ನಂಬರ್‌ ಕೂಡ ನೀಡಿದ್ದಾರೆ. ವರದಿಗಳ ಪ್ರಕಾರ, ಜನವರಿ 1 ರಿಂದ ಮಾರ್ಚ್ 31 ರವರೆಗೆ, ಮಹಾರಾಷ್ಟ್ರದಲ್ಲಿ 16-35 ವರ್ಷದೊಳಗಿನ 3,594 ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ಮುಂಬೈಯೊಂದರಲ್ಲೇ 383 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

Advertisement

 

View this post on Instagram

 

A post shared by Sunny Leone (@sunnyleone)

Advertisement
Tags :
Advertisement