ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಚುನಾವಣಾ ಬಾಂಡ್" ವಿಚಾರ : ಎಸ್‌ಬಿಐ ವಿರುದ್ಧ ಸುಪ್ರೀಂ ಗರಂ

ಚುನಾವಣಾ ಬಾಂಡ್ ಪ್ರಕರಣದಲ್ಲಿ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ತೀವ್ರ ಛೀಮಾರಿ ಹಾಕಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರ್ಜಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಮಾರ್ಚ್ 12 ರ ಕೆಲಸದ ಅವಧಿಯ ಅಂತ್ಯದೊಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸುವಂತೆ ಹೇಳಿದೆ.
12:42 PM Mar 11, 2024 IST | Ashitha S

ನವದೆಹಲಿ: ಚುನಾವಣಾ ಬಾಂಡ್ ಪ್ರಕರಣದಲ್ಲಿ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ತೀವ್ರ ಛೀಮಾರಿ ಹಾಕಿದೆ. ಇದರೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರ್ಜಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಮಾರ್ಚ್ 12 ರ ಕೆಲಸದ ಅವಧಿಯ ಅಂತ್ಯದೊಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸುವಂತೆ ಹೇಳಿದೆ.

Advertisement

ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಹೆಚ್ಚುವರಿ ಸಮಯ ಬೇಕು. ಜೂನ್ 30 ವರೆಗೂ ಸಮಯ ಬೇಕಾಗಲಿದೆ. ಮಾಹಿತಿ ನೀಡಲು ಎಸ್‌ಬಿಐ ಸಮಸ್ಯೆ ಎದುರಿಸುತ್ತಿದೆ. ಬ್ಯಾಂಕ್ ಇಡೀ ಪ್ರಕ್ರಿಯೆಯನ್ನು ರಿವರ್ಸ್ ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖರೀದಿದಾರರ ಹೆಸರು ಮತ್ತು ಬಾಂಡ್ ಸಂಖ್ಯೆ ಇಲ್ಲ, ಇದು ರಹಸ್ಯವಾಗಿದೆ. ಈ ಹಿನ್ನಲೆ ಮಾಹಿತಿ ನೀಡಲು ಕಾಲಾವಕಾಶ ಬೇಕಾಗಲಿದೆ ಎಂದು ಎಸ್‌ಬಿಐ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ‌ ಮಂಡಿಸಿದರು.

ಇನ್ನು ತೀರ್ಪಿನಲ್ಲಿ, ದಾಖಲೆ ಹೊಂದಾಣಿಕೆ ಮಾಡಲು ನಾವು ಕೇಳಿಲ್ಲ. ನಾವು ಸರಳವಾಗಿ ಮಾಹಿತಿಯನ್ನು ಬಹಿರಂಗಪಡಿಸಲು ನಿರ್ದೇಶಿಸಿದ್ದೇವೆ. ಆದ್ದರಿಂದ ದಾಖಲೆಯ ಹೊಂದಾಣಿಕೆ ಮಾಡಬೇಕೆಂದು ಸಮಯವನ್ನು ಹುಡುಕುವುದು ಸಮರ್ಥನೀಯವಲ್ಲ. ಹಾಗೆ ಮಾಡಲು ನಾವು ನಿಮಗೆ ನಿರ್ದೇಶನ ನೀಡಿಲ್ಲ. ಮಾರ್ಚ್ 12 ರ ಕೆಲಸದ ಅವಧಿಯ ಅಂತ್ಯದೊಳಗೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

Advertisement

Advertisement
Tags :
BREAKINGindiaNewsKannadaSBIಚುನಾವಣಾ ಬಾಂಡ್​ನವದೆಹಲಿ
Advertisement
Next Article